ಸುಳ್ಯದಲ್ಲಿ ಹೆಚ್ಚುಗೊಂಡ ಪೊಲೀಸ್ ಬಿಗಿ ಬಂದೋಬಸ್ತ್ | ವಾಹನ ರಸ್ತೆಗಿಳಿದರೆ ದಂಡ
ಕಳೆದ ಎರಡು ದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋರೋನಾ ಶಂಕಿತರ ಸಂಖ್ಯೆ ಹೆಚ್ಚಾಗಿದ್ದು ಈ ನಿಟ್ಟಿನಲ್ಲಿ ಸುಳ್ಯ ತಾಲೂಕಿನಾದ್ಯಂತ ಪೊಲೀಸರ ಬಿಗಿ ಬಂದೋಬಸ್ತ್ ಹೆಚ್ಚಾಗುತ್ತಿದೆ.
ಅನಾವಶ್ಯಕ ಕಾರ್ಯಗಳಿಂದ ಖಾಸಗಿ ವಾಹನಗಳು ರಸ್ತೆಗೆ ಇಳಿಯಬಾರದು ಎಂಬ ಆದೇಶಗಳು ಬಂದಿದ್ದರೂ, ಕೆಲವು ವಾಹನ ಸವಾರರು ವಿನಾ ಕಾರಣ ಪೇಟೆಯಲ್ಲಿ ತಿರುಗಾಡುವುದು ಕಂಡುಬರುತ್ತಿದ್ದು ಇಂತಹ ವಾಹನಗಳನ್ನು ಪೊಲೀಸರು ತಡೆದು ಪರಿಶೀಲಿಸಿ ತಪ್ಪಿತಸ್ಥರ ಮೇಲೆ ಚಲನ್ ಹರಿಯುವ ಕಾರ್ಯ ಅಲ್ಲಲ್ಲಿ ಕಂಡುಬರುತ್ತಿತ್ತು.
ದ್ವಿಚಕ್ರ ವಾಹನ ಬಿಟ್ಟು ಬೇರೆ ಯಾವುದೇ ವಾಹನಗಳನ್ನು ರಸ್ತೆಗೆ ಬಿಡುವುದಿಲ್ಲವೆಂದು ಈಗಾಗಲೇ ಜಿಲ್ಲಾಡಳಿತ ಸ್ಪಷ್ಟಪಡಿಸಿತ್ತು. ಆದರೂ ಹಲವು ಕಾರುಗಳು ರಸ್ತೆಗೆ ಇಳಿದಿದ್ದವು. ಪೊಲೀಸರು ಅಂತಹ ವಾಹನಗಳನ್ನು ರಸ್ತೆಗೆ ಬಂದ ಕೂಡಲೇ ವಾಪಸ್ಸು ಕಳಿಸುತ್ತಿದ್ದರು.
ಸುಳ್ಯ ನಗರದ ಜ್ಯೋತಿ ವೃತ್ತದ ಬಳಿ, ಸುಳ್ಯ ಪೊಲೀಸ್ ಠಾಣೆ ಬಳಿ, ಗಾಂಧಿನಗರ ಪೆಟ್ರೋಲ್ ಬಂಕ್ ಬಳಿ, ಶ್ರೀ ಚನ್ನಕೇಶ್ವರ ದೇವಸ್ಥಾನದ ಬಳಿ, ವಿವೇಕಾನಂದ ಸರ್ಕಲ್ ಬಳಿ ಮುಂತಾದ ಕಡೆಗಳಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.