Mangaluru: ಮಂಗಳೂರು: ಪಾನ್ ಶಾಪ್ ನಲ್ಲಿ ಚಾಕಲೇಟ್ ಮಾದರಿಯ ಮಾದಕ ಚಾಕಲೇಟ್ ಮಾರಾಟ : ಆರೋಪಿ ಬಂಧನ!

Mangaluru: ಪಾನ್ ಶಾಪ್ ನಲ್ಲಿ ವ್ಯಕ್ತಿಯೊಬ್ಬ ಚಾಕಲೇಟ್ ಮಾದರಿಯ ಮಾದಕ ದ್ರವ್ಯದ ಸುವಾಸನೆಯುಳ್ಳ ಚಾಕಲೇಟ್ ಮಾರಾಟ ನಡೆಸುತ್ತಿದ್ದ ವೇಳೆ ಮಂಗಳೂರು (Mangaluru) ಉಪವಿಭಾಗದ ಅಬಕಾರಿ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ.
ಮಂಗಳೂರು ಪಂಪೈಲ್ ಹತ್ತಿರದಲ್ಲಿರುವ ಕೆನರಾ ಬ್ಯಾಂಕ್ ಮುಂದುಗಡೆ ಉತ್ತರ ಪ್ರದೇಶ ಮೂಲದ ಸುಜಿತ್ ಕುಮಾರ್ ಎಂಬಾತ ಪಾನ್ ಶಾಪ್ ಹೊಂದಿದ್ದು, ಆತನಿಂದ 303 ಗ್ರಾಂ. ಬಮ್ ಬಮ್ ಚಾರ್ ಮಿನಾರ್ ಹೆಸರಿನ ಮಾದಕ ದ್ರವ್ಯ ಸುವಾಸನೆಯುಳ್ಳ ಚಾಕಲೇಟ್ ವಶಕ್ಕೆ ಪಡೆದುಕೊಳ್ಳಲಾಗಿದೆ.
Comments are closed.