Online: ಆನ್‌ಲೈನ್ ವಂಚನೆಯಿಂದ 27ಲಕ್ಷ ಕಳೆದುಕೊಂಡ ಅಜೆಕಾರಿನ ವ್ಯಕ್ತಿ

Share the Article

Online: ಅಜೆಕಾರಿನ ಆಶೀಕ್ ಎ (33)ಇವರು ಆನ್‌ಲೈನ್ ವಂಚನೆಯಿಂದ 27ಲಕ್ಷ ಕಳೆದುಕೊಂಡ ಘಟನೆ ನಡೆದಿದೆ.

ಇವರ ಟೆಲಿಗ್ರಾಂ ಖಾತೆಗೆ ಮೇ.25 ರಂದು ನೆಹಾ ಕುಮಾರ್ ಎಂಬವರ ಖಾತೆಯಿಂದ ವರ್ಕ್ ಪ್ರಾಮ್ ಹೋಂ ಪಾರ್ಟ್ ಟೈಮ್ ಜಾಬ್ ಬಗ್ಗೆ ಮತ್ತು ಒನ್ ಟ್ರಾವೆಲ್ ಹೊಟೇಲ್ ಬುಕ್ಕಿಂಗ್ ಆನ್‌ಲೈನ್ ವೆಬ್‌ಸೈಟ್‌ರಲ್ಲಿ ಹೊಟೆಲ್ ಗೆ ರಿವಿವ್ಯೂ ಹಾಕುವ ಬಗ್ಗೆ ಸಂದೇಶ ಬಂದಿದ್ದು, ರಿವಿವ್ಯೂ ಹಾಕುವುದಕ್ಕೆ ರೂ500 ರಿಂದ ರೂ 4500/- ರವರೆಗೆ ಕಮಿಷನ್ ಸಿಗುವುದಾಗಿ ತಿಳಿಸಿದ್ದಾರೆ.

 

ಅದರಂತೆ https://travelwork.vip/ ವೆಬ್ಸೈಟ್ ಲಿಂಕ್ ಒಂದನ್ನು ರಿಜಿಸ್ಟ್ರರ್ ಮಾಡಲು ಕಳುಹಿಸಿದ್ದು, ಆಶೀಕ್‌ರವರು ವೆಬ್ಸೈಟ್ ಗೆ ಮೊಬೈಲ್ ಸಂಖ್ಯೆ ಯನ್ನು ಹಾಕಿ ರಿಜಿಸ್ಟ್‌ರ್ ಆಗಿ, ನಂತರ ಅವರು ನೀಡಿದ ಟಾಸ್ಕ್‌ಗಳನ್ನು ಮಾಡಿ, ಅವರು ತಿಳಿಸಿದ ಬೇರೆ ಬೇರೆ ಖಾತೆಗಳಿಗೆ ಒಟ್ಟು ರೂ 27,93,340/- ಮೊತ್ತವನ್ನು ವರ್ಗಾವಣೆ ಮಾಡಿರುತ್ತಾರೆ.

 

ನಂತರ ಇದೊಂದು ಮೋಸದ ವ್ಯವಹಾರವೆಂದು ಆಶೀಕ್‌ರವರಿಗೆ ತಿಳಿದು ಬಂದಿದ್ದು, ಅಕ್ರಮವಾಗಿ ಲಾಭ ಮಾಡುವ ಉದ್ದೇಶದಿಂದ ಟೆಲಿಗ್ರಾಂ ಖಾತೆಯ ಮುಖಾಂತರ ಸಂಪರ್ಕಿಸಿ, ಲಾಭ ಬರುವುದಾಗಿ ನಂಬಿಸಿ, ಒಟ್ಟು ರೂ 27,93,340/- ಮೊತ್ತವನ್ನು ಮೋಸ ಮಾಡಿ ಬೇರೆ ಬೇರೆ ಖಾತೆಗಳಿಗೆ ವರ್ಗಾಯಿಸಿಕೊಂಡು ಟೆಲಿಗ್ರಾಂ ಜಾಲತಾಣ ವೆಬ್ಸೈಟ್ ಗಳನ್ನು ದುರ್ಬಳಕೆ ಮಾಡಿಕೊಂಡು ಮೋಸ ವಂಚನೆ ಮಾಡಿರುವುದಾಗಿದೆ. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Comments are closed.