Mumbai: ಬೆತ್ತಲೆ ವೀಡಿಯೋಗಾಗಿ ಮಹಿಳೆಯರಿಗೆ ಒತ್ತಡ, 11 ನಕಲಿ ಖಾತೆ, 100 ಕ್ಕೂ ಹೆಚ್ಚು ಇ-ಮೇಲ್‌ ಐಡಿ, 13500 ಮಹಿಳೆಯರ ಫೊಟೋ ಇಟ್ಕೊಂಡಿದ್ದ ವ್ಯಕ್ತಿ ಅರೆಸ್ಟ್‌

Share the Article

Mumbai: ಮಹಿಳೆಯರ ಹೆಸರಿನಲ್ಲಿ ನಕಲಿ ಖಾತೆ ಮಾಡಿ, ಮಾನಹಾನಿ ಉಂಟುಮಾಡುವ ಉದ್ದೇಶದಿಂದ ಅಶ್ಲೀಲ ವಿಷಯವನ್ನು ಪೋಸ್ಟ್‌ ಮಾಡಿದ ವ್ಯಕ್ತಿಯೊಬ್ಬನನ್ನು ಕರ್ನಾಟಕದ ಸಂಡೂರಿನಲ್ಲಿ ಮುಂಬೈ ಪೊಲೀಸರು ಬಂಧನ ಮಾಡಿದ್ದಾರೆ.

 

ಶುಭಂ ಕುಮಾರ್‌ ಮನೋಜ್‌ ಪ್ರಸಾದ್‌ ಸಿಂಗ್‌ (25) ಬಂಧಿತ ವ್ಯಕ್ತಿ. ದೆಹಲಿಯಲ್ಲಿ ಕಂಪ್ಯೂಟರ್‌ ಸಾಫ್ಟ್‌ಸ್ಟಿಲ್ಸ್‌ನಲ್ಲಿ ಡಿಪ್ಲೋಮಾ ಪಡೆದಿದ್ದು, ಸಂಡೂರಿನಲ್ಲಿ ಸೆಕ್ಯೂರಿಟಿ ಗಾರ್ಡ್‌ ಆಗಿ ಕೆಲಸ ಮಾಡುತ್ತಿದ್ದ. ವಿದ್ಯಾರ್ಥಿನಿಯೋರ್ವಳು ತನ್ನ ಹೆಸರಿನಲ್ಲಿ ನಕಲಿ ಖಾತೆ ಮಾಡಿ ಅಶ್ಲೀಲ ಸಂದೇಶ ಹಾಗೂ ವಿಡಿಯೋಗಳನ್ನು ಪೋಸ್ಟ್‌ ಮಾಡುತ್ತಿರುವುದಾಗಿ ದೂರು ದಾಖಲು ಮಾಡಿದ ನಂತರ ಗೂಗಲ್‌ನಿಂದ ತಾಂತ್ರಿಕ ಮಾಹಿತಿ ಕಲೆ ಹಾಕಿ ಆರೋಪಿಯ ಬಂಧನ ಮಾಡಲಾಗಿದೆ.

 

ಈತ ಮಹಿಳೆಯರ ಹೆಸರಿನಲ್ಲಿ 11 ನಕಲಿ ಖಾತೆಗಳನ್ನು, 100 ಕ್ಕೂ ಹೆಚ್ಚು ಇಮೇಲ್‌ ಐಡಿ ಸೃಷ್ಟಿ ಮಾಡಿರುವುದು ಕಂಡು ಬಂದಿದೆ. ಮಹಿಳೆಯರ 13,500 ಸ್ಕ್ರೀನ್‌ ಶಾಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈತ ಮಹಿಳೆಯರಿಗೆ ಕರೆ ಮಾಡಿ ನಗ್ನವಾಗಿ ವಿಡಿಯೋ ಕರೆ ಮಾಡು ಎಂದು ಕಿರುಕುಳ ನೀಡುತ್ತಿದ್ದ. ಅವರು ಒಪ್ಪದೇ ಇದ್ದಾಗ, ನಕಲಿ ಖಾತೆ ಸೃಷ್ಟಿ ಮಾಡಿ ಮಾನಹಾನಿ ಮಾಡುತ್ತಿದ್ದ ಎಂದು ಆರೋಪಿ ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Comments are closed.