Priyank Kharge: ಪ್ರಿಯಾಂಕ್ ಖರ್ಗೆಗೆ ಬಿಗ್ ಶಾಕ್: ಅಮೆರಿಕಗೆ ತೆರಳಲು ನೋ ಕ್ಲಿಯರೆನ್ಸ್

Priyank Kharge: ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆಗೆ ಕ್ಲಿಯರೆನ್ಸ್ ಸಿಗದ ಕಾರಣ ಅಮೆರಿಕದಲ್ಲಿ ಹಲವು ಕಾರ್ಯಕ್ರಮಗಳಿಗೆ ಗೈರಾಗಬೇಕಾಗಿದೆ. ಪ್ಯಾರಿಸ್ ಪ್ರವಾಸ ಮುಗಿಸಿ ಅಮೆರಿಕಗೆ ತೆರಳಬೇಕಿತ್ತು ಸಚಿವರು.
ಅಮೆರಿಕ ಭೇಟಿಗೆ ಕ್ಲಿಯರೆನ್ಸ್ ಸಿಗದ ಕಾರಣ ಪ್ರಿಯಾಂಕ್ ಖರ್ಗೆ ಬೇಸರ ವ್ಯಕ್ತಪಡಿಸಿದ್ದು ಕ್ಲಿಯರೆನ್ಸ್ ನಿರಾಕರಿಸಿದ್ದು ಯಾರು ಎನ್ನುವ ಗೊಂದಲವಿದೆ.
ಭಾರತದಿಂದ ಸಿಗಲಿಲ್ಲವೋ? ಅಮೆರಿಕ ಕೊಟ್ಟಿಲ್ಲವೋ ಎನ್ನುವ ಗೊಂದಲವಿದೆ. ಹಾಗಾಗಿ ಕರ್ನಾಟಕಕ್ಕೆ ವಾಪಾಸು ಬಂದು ಈ ಕುರಿತು ಮಹತ್ವದ ಸುದ್ದಿಗೋಷ್ಠೀ ನಡೆಸುವ ಸಾಧ್ಯತೆಯಿದೆ ಎನ್ನಲಾಗಿದೆ. ಸ್ಯಾನ್‌ಫ್ರಾನ್ಸಿಸ್ಕೋ ನಗರಗಳಲ್ಲಿ ಐಟಿಬಿಟಿಗೆ ಸಂಬಂಧಪಟ್ಟಂತೆ ಕಾನ್ಫೆರೆನ್ಸ್ ಇತ್ತು. ಇದರಲ್ಲಿ ಪ್ರಿಯಾಂಕ್ ಖರ್ಗೆ ಭಾಗವಹಿಸಬೇಕಿತ್ತು. ಪ್ರಿಯಾಂಕ್ ಖರ್ಗೆ ಜೊತೆ ತೆರಳಿದ್ದ ಐಎಎಸ್ ಅಧಿಕಾರಿಗೆ ಅಮೆರಿಕೆ ಹೋಗಲು ಕ್ಲಿಯರೆನ್ಸ್ ದೊರಕಿದೆ.
Comments are closed.