Salumarada Timakka: ತನ್ನ ಜೀವನ ಚರಿತ್ರೆ ಚಿತ್ರೀಕರಣಕ್ಕೆ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ವಿರೋಧ: ಫಿಲ್ಮ್‌ ಚೇಂಬರ್‌ಗೆ ದೂರು

Share the Article

Salumarada Timakka: ಸಾಲಮರದ ತಿಮ್ಮಕ್ಕ ಅವರ ಜೀವನ ಚರಿತ್ರೆ ಸಿನಿಮಾಗೆ ಸಿದ್ಧವಾಗುತ್ತಿದ್ದು, ಇದಕ್ಕೆ ಸಾಲುಮರದ ತಿಮ್ಮಕ್ಕ ವಿರೋಧ ವ್ಯಕ್ತಪಡಿಸಿದ್ದಾರೆ. ಇದಕ್ಕಾಗಿ ಅವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರನ್ನು ನೀಡಿದ್ದಾರೆ.

ನನ್ನ ಅನುಮತಿ ಪಡೆಯದೇ ಜೀವನ ಚರಿತ್ರೆ ಸಿನಿಮಾ ಮಾಡಲಾಗುತ್ತಿದ್ದು, ಇದಕ್ಕೆ ತಡೆಯೊಡ್ಡಬೇಕು ಎಂದು ಫಿಲ್ಮ್‌ಚೇಂಬರ್‌ಗೆ ಸಾಲುಮರದ ತಿಮ್ಮಕ್ಕ ದೂರನ್ನು ನೀಡಿದ್ದಾರೆ.

ಇತ್ತೀಚೆಗಷ್ಟೇ ಒರಟ ಶ್ರೀ ನಿರ್ದೇಶನದಲ್ಲಿ ವೃಕ್ಷಮಾತೆ ಸಿನಿಮಾ ಸೆಟ್ಟೇರಿತ್ತು. ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಕೃತಿ ಆಧಾರಿತ ಸಿನಿಮಾ ಇದು ಎಂದು ಚಿತ್ರತಂಡ ತಿಳಿಸಿತ್ತು. ಈ ಬೆನ್ನಲ್ಲೇ ತನ್ನ ಅನುಮತಿ ಪಡೆಯದೇ ಸಿನಿಮಾ ಮಾಡಲು ಮುಂದಾಗಿರುವ ಚಿತ್ರತಂಡಕ್ಕೆ ಸಾಲುಮರದ ತಿಮ್ಮಕ್ಕ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಒಂದು ತಿಂಗಳ ಹಿಂದೆ ದಿಲೀಪ್‌ ಕುಮಾರ್‌ ಹಾಗೂ ಒರಟ ಶ್ರೀ ಅವರು ಬಂದು ಸಿನಿಮಾ ಮಾಡುತ್ತೇವೆ ಅನುಮತಿ ಕೊಡಿ ಎಂದು ಕೇಳಿದ್ದರು. ಆದರೆ ನಾವು ಅನುಮತಿ ಕೊಟ್ಟಿರಲಿಲ್ಲ. ಇದೇ ರೀತಿ ಹಲವು ನಿರ್ದೇಶಕರು ಕೇಳಿದ್ದರು. ಸಾಲುಮರದ ತಿಮ್ಮಕ್ಕ ಅವರ ಜೀವನ ಚರಿತ್ರೆ ಆಗುವುದು ಒಂದೇ ಬಾರಿ. ಇದು ವಿಶ್ವಮಟ್ಟಕ್ಕೆ ತಲುಪಬೇಕು. ಸೂಕ್ತ ನಟ-ನಟಿಯರಿಲ್ಲದೇ ಇದಕ್ಕೆ ಒಪ್ಪಿಗೆ ನೀಡಲು ಸಾಧ್ಯವಿಲ್ಲ ಎಂದು ಸಾಲುಮರದ ತಿಮ್ಮಕ್ಕ ಅವರ ದತ್ತುಪುತ್ರ ಉಮೇಶ್‌ ತಿಳಿಸಿದ್ದಾರೆ.

Comments are closed.