Tamil Nadu: ನೀನು ಸುಂದರವಾಗಿಲ್ಲ ಎಂದ ಪತಿ: ಪತಿ ಯನ್ನು ಬೆಂಕಿ ಹಚ್ಚಿ ಸುಟ್ಟ ಪತ್ನಿ

Share the Article

Tamil Nadu: ನೀನು ಸುಂದರಿಯಲ್ಲ ಎಂದು ಹೇಳಿದ್ದರು ಎಂಬ ಕಾರಣಕ್ಕಾಗಿ ಪತಿಯನ್ನೇ ಬೆಂಕಿ ಹಚ್ಚಿ ಪತ್ನಿಯು ಸುಟ್ಟು ಹಾಕಿರುವ ಘಟನೆ ಕೃಷ್ಣಗಿರಿಯಲ್ಲಿ ನಡೆದಿದೆ.

ಇನ್ನು ಮೃತ ದುರ್ದೈವಿಯನ್ನು ರಂಗಸ್ವಾಮಿ(47) ಎಂದು ಗುರುತಿಸಲಾಗಿದ್ದು, ಮೃತನ ಪತ್ನಿ ಕವಿತಾ (44) ಆರೋಪಿಯಾಗಿದ್ದಾಳೆ. ಇನ್ನು ಈ ದಂಪತಿಗಳಿಗೆ ಮೂವರು ಮಕ್ಕಳಿದ್ದು, ಒಬ್ಬಳು ಮಗಳಿಗೆ ವಿವಾಹವಾಗಿದ್ದು, ಇನ್ನೋರ್ವ ಮಗಳು ಹಾಗೂ ಮಗ ಬ್ಯಾಸಂಗ ಮಾಡುತ್ತಿದ್ದಾರೆ.

ಜೂನ್ 9ರಂದು ಈ ಘಟನೆ ನಡೆದಿದ್ದು ನೆರೆ ಹೊರೆಯವರು ಆಸ್ಪತ್ರೆಗೆ ದಾಖಲು ಮಾಡಿರುತ್ತಾರೆ, ಜೂನ್ 11ರಂದು ಚಿಕಿತ್ಸೆ ಫಲಕಾರಿಯಾಗದೆ ರಂಗಸ್ವಾಮಿ ಸಾವನ್ನಪ್ಪಿದ್ದಾರೆ. ಹಾಗೂ ಜೂನ್ 13ರಂದು ತಿರುಪತಿಯಲ್ಲಿ ಕವಿತಾಳನ್ನು ಬಂಧಿಸಲಾಗಿದೆ.

Comments are closed.