Viral Tweet: ‘ಪತನಗೊಂಡ ವಿಮಾನದಲ್ಲಿ ನೀವಿರಬೇಕಿತ್ತು’ – ರಾಹುಲ್ ಗಾಂಧಿಗೆ ಚುಚ್ಚಿದ ‘ಎಕ್ಸ್’ ಬಳಕೆದಾರ

Share the Article

Viral Tweet: ಅಹಮದಾಬಾದ್ ವಿಮಾನ ನಿಲ್ದಾಣದಿಂದ ಟೇಕಾಫ್ ಆದ ಕೆಲವೇ ಹೊತ್ತಿನಲ್ಲಿ 242 ಪ್ರಯಾಣಿಕರಿದ್ದ ವಿಮಾನ ಪತನಗೊಂಡಿದ್ದು, ಘಟನೆಯಲ್ಲಿ 242 ಪ್ರಯಾಣಿಕರಲ್ಲಿ 241 ಮಂದಿ ಸಾವನ್ನಪ್ಪಿದ್ದಾರೆ. ಈ ಬೆನ್ನಲ್ಲೇ ಟಾಟಾ ಗ್ರೂಪ್ ಸಾವನ್ನಪ್ಪಿದ ಪ್ರತಿಯೊಬ್ಬರ ಕುಟುಂಬಕ್ಕೆ ಒಂದು ಕೋಟಿ ಪರಿಹಾರವನ್ನು ಘೋಷಿಸಿದೆ.

ಈ ವಿಮಾನ ಪತನಕ್ಕೆ ಇಡೀ ದೇಶದ ಪ್ರಮುಖರು ಕಂಬನಿ ಮಿಡಿದಿದ್ದಾರೆ. ರಾಜಕೀಯ ನಾಯಕರು ಟ್ವೀಟ್ ಮಾಡಿ ವಿಷಾದ ವ್ಯಕ್ತಪಡಿಸಿದ್ದಾರೆ. ಅಂತೆಯೇ ಘಟನೆ ಬಗ್ಗೆ ರಾಹುಲ್ ಗಾಂಥಿ ಸಂತಾಪ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದರು. ಈ ಟ್ವೀಟ್ ಗೆ ಅನುಭವ್ ಗುಪ್ತಾ ಎಂಬ ಎಕ್ಸ್ ಬಳಕೆದಾರ ಆಕ್ಷೇಪಾರ್ಹವಾಗಿ ಪ್ರತಿಕ್ರಿಯಿಸಿದ್ದರು.

ಹೌದು, ಅನುಭವ್ ಗುಪ್ತಾ ನೀವೂ ಕೂಡಾ ಅದೇ ಫ್ಲೈಟ್ ನಲ್ಲಿರಬೇಕಿತ್ತು ಎಂದು ರಾಹುಲ್ ಗಾಂಧಿ ಸಾವು ಬಯಸಿ ಪ್ರತಿಕ್ರಿಯಿಸಿದ್ದರು. ಈ ಟ್ವೀಟ್ ಗೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಈತನ ಕ್ರಮ ಕೈಗೊಳ್ಳಬೇಕೆಂದು ಕಾಂಗ್ರೆಸ್ ಬೆಂಬಲಿಗರು ಆಗ್ರಹಿಸಿದ್ದರು. ಇದರ ಬೆನ್ನಲ್ಲೇ ಅನುಭವ್ ಗುಪ್ತಾ ಮತ್ತೊಂದು ಟ್ವೀಟ್ ಮಾಡಿದ್ದು, ತಮ್ಮ ಪ್ರತಿಕ್ರಿಯೆಗೆ ಕ್ಷಮೆ ಯಾಚಿಸಿದ್ದಾರೆ.

Mangaluru Plane Crash: ಮಂಗಳೂರು ವಿಮಾನ ದುರಂತಕ್ಕೆ 15 ವರ್ಷ, ಅಂದು ಪೈಲಟ್ ಗ್ಲುಸಿಕಾ ಮಾಡಿದ್ದ ತಪ್ಪೇನು?

Comments are closed.