Mangaluru: ಯೆಯ್ಯಾಡಿಯಲ್ಲಿ ಚೂರಿ ಇರಿತ ಪ್ರಕರಣ- ಚಿಕಿತ್ಸೆ ಫಲಿಸದೆ ಯುವಕ ಮೃತ್ಯು!!

Mangaluru : ಕಳೆದ ಶುಕ್ರವಾರದಂದು ಮಂಗಳೂರಿನ ಯೆಯ್ಯಾಡಿಯಲ್ಲಿ ಚಾಕು ಇರಿತಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಕೌಶಿಕ್ ಎಂಬಾತ ಇದೀಗ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ.
ಅಂದಹಾಗೆ ಕಳೆದ ಶುಕ್ರವಾರ ಮಂಗಳೂರಿನ ಯೆಯ್ಯಾಡಿಯಲ್ಲಿ ಮಧ್ಯಾಹ್ನದಂದು ಕೌಶಿಕ್ ಹಾಗೂ ಇತರರ ನಡುವೆ ಗಲಾಟೆಯಾಗಿತ್ತು. ಗಲಾಟೆಯ ಸಂದರ್ಭದಲ್ಲಿ ಬ್ರಿಜೇಶ್ ಶೆಟ್ಟಿ, ಗಣೇಶ್ ಬಿಜೈ ಎಂಬುವರು ಚಾಕುವಿನಿಂದ ಕೌಶಿಕ್ ಹೊಟ್ಟೆಗೆ ಇರಿದಿದ್ದರು. ತೀವ್ರ ರಕ್ತಸ್ತ್ರಾವದಿಂದ ಗಾಯಗೊಂಡಿದ್ದಂತ ಕೌಶಿಕ್ ನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು.
ಇಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಂತ ಕೌಶಿಕ್ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ. ಹೀಗಾಗಿ ಕೊಲೆ ಯತ್ನ ಪ್ರಕರಣ, ಈಗ ಕೊಲೆ ಪ್ರಕರಣವಾಗಿ ಬದಲಾದಂತೆ ಆಗಿದೆ.
ಇನ್ನು ಈ ದಾಳಿ ಇಬ್ಬರ ನಡುವಿನ ಹಳೇ ವೈಷಮ್ಯದ ಕಾರಣದಿಂದ ನಡೆದಿತ್ತು ಎನ್ನಲಾಗಿದ್ದು, ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
Comments are closed.