Chikkamagluru : ಚಿಕ್ಕಮಗಳೂರಲ್ಲಿ ‘ಹಾಲು ಕದಿಯುವ ಹಸು’ ಪತ್ತೆ !! ಸಿಸಿಟಿವಿ ಯಲ್ಲಿ ಹಸುವಿನ ಕೈಚಳಕ ಸೆರೆ!!

Share the Article

Chikkamagluru : ಕಳ್ಳತನ ಎಂದ ತಕ್ಷಣ ನಮಗೆ ನೆನಪಿಗೆ ಬರುವವರು ಮನುಷ್ಯರೇ. ಏಕೆಂದರೆ ಈ ಕಳ್ಳತನದ ಕಾರ್ಯ ಎಸಗುವವರು ಮನುಷ್ಯರು ಮಾತ್ರ. ಆದರೆ ಚಿಕ್ಕಮಗಳೂರಿನ ಮೂಡಿಗೆರೆಯಲ್ಲಿ ಒಂದು ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದ್ದು, ಹಸು ಒಂದು ಕಳ್ಳತನ ಮಾಡಿ ಸಿಕ್ಕಿಬಿದ್ದಿದೆ.

ಹೌದು, ಮೂಡಿಗೆರೆಯ ವಿಕ್ರಂ ಎಂಬವರ ಅಂಗಡಿಯಲ್ಲಿ ಪ್ರತಿದಿನ 10-20 ಲೀಟರ್ ಹಾಲು ಕಳ್ಳತನವಾಗುತ್ತಿತ್ತು. ಹಾಲಿನ ವಾಹನ ಅಂಗಡಿ ಮುಂದೆ ಸರಿಯಾಗಿ ಸಂಖ್ಯೆ ಪ್ರಕಾರ ಹಾಲಿನ ಟ್ರೇ ಇಳಿಸಿ ಹೋಗುತ್ತಿದ್ದರೂ ಹಾಲಿನ ಪ್ಯಾಕೆಟ್‌ಗಳು ಅಲ್ಲಿ ಇರುತ್ತಿರಲಿಲ್ಲ. ವಿಕ್ರಂ ಮೊದಲಿಗೆ ಇದು ಮಾನವರ ಕಳ್ಳತನವೆಂದು ಶಂಕಿಸಿದ್ದರು.

ಆದರೆ ಕಳೆದ ರಾತ್ರಿ 20 ಲೀಟರ್ ಹಾಲು ಕುಡಿದಿರುವುದಕ್ಕೆ ಸೇರ್ಪಡೆಯಾಗಿ, ಪ್ಲಾಸ್ಟಿಕ್ ಹಾಲಿನ ಕವರ್‌ಗಳೂ ಕಾಣೆಯಾಗಿದ್ದವು. ಈ ಹಿನ್ನೆಲೆ ಅವರು ಅಂಗಡಿಯ ಸಿಸಿಟಿವಿ ಪರಿಶೀಲಿಸಿದಾಗ, ಇದುವರೆಗೂ ಯಾರೂ ಊಹಿಸದ ದೃಶ್ಯಗಳು ಬಯಲಾಗಿವೆ. ಅದೇನೆಂದರೆ ಆ ಹಾಲು ಕದಿಯುತ್ತಿದ್ದ ಕಳ್ಳ ಒಂದು ಹಸು ಎಂಬುದು ತಿಳಿದು ಬಂದಿದೆ.

ಯಸ್, ಒಂದು ಹಸು ಟ್ರೇಯಲ್ಲಿದ್ದ ಎಲ್ಲಾ ಹಾಲು ಕುಡಿದು ಪ್ಯಾಕೆಟ್‌ಗಳನ್ನೂ ತಿಂದಿತ್ತು! ಈ ಘಟನೆ ಎಲ್ಲೆಡೆ ವೈರಲ್ ಆಗುತ್ತಿದ್ದು, “ಹಾಲು ಕದಿಯುವ ಹಸು” ಸದ್ಯ ಸೆಲೆಬ್ರಿಟಿಯಾಗಿ ಪರಿಣಮಿಸಿದೆ. ಸ್ಥಳೀಯರು ಕೂಡ ಈ ಅಪರೂಪದ ಬೆಳವಣಿಗೆಯ ಬಗ್ಗೆ ಆಶ್ಚರ್ಯಚಕಿತರಾಗಿದ್ದಾರೆ.

Flight Mileage: ವಿಮಾನ ಎಷ್ಟು ಮೈಲೇಜ್ ಕೊಡುತ್ತೆ ?

 

Comments are closed.