Air India Crash: ಏರ್‌ಇಂಡಿಯಾ ವಿಮಾನ ದುರಂತದಲ್ಲಿ ಕೇರಳದ ನರ್ಸ್ ಸಾವು: ತಹಶೀಲ್ದಾರ್ ವ್ಯಂಗ್ಯ, ಸಸ್ಪೆಂಡ್

Air India Crash: ಗುಜರಾತ್‌ನ ಅಹಮದಾಬಾದ್‌ನಲ್ಲಿ ಸಂಭವಿಸಿದ ಏರ್‌ಇಂಡಿಯಾ ವಿಮಾನ ದುರಂತದಲ್ಲಿ ಮಡಿದ ಕೇರಳ ಮೂಲದ ನರ್ಸ್ ರಂಜಿತಾ ಕುರಿತು ವ್ಯಂಗ್ಯವಾಡಿದ್ದ ತಹಶೀಲ್ದಾರ್ ನನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.
ಕಾಸರಗೋಡು ಜಿಲ್ಲೆಯ ವೆಳ್ಳರಿಕುಂಡ್ ತಾಲೂಕು ಡೆಪ್ಯೂಟಿ ತಹಶೀಲ್ದಾರ್ ಪವಿತ್ರನ್ ಅಮಾನತುಗೊಂಡಿರುವ ಅಧಿಕಾರಿ. ಕೇರಳ ಸರಕಾರಕ್ಕೆ ರಜೆ ನಿಲ್ಲಿಸಿ ಹೋಗಿದ್ದಕ್ಕೆ ರಂಜಿತಾ ಸಾವಿಗೀಡಾಗಿದ್ದಾರೆ ಎಂದು ಪವಿತ್ರನ್ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದರು. ಅಲ್ಲದೇ ಇನ್ನೊಂದು ಪೋಸ್ಟ್‌ನಲ್ಲಿ ಆಕೆ ಇನ್ನೂ ಎತ್ತರಕ್ಕೆ ಏರಲಿ ಎಂದು ಬರೆದಿದ್ದರು.
ಈ ಪೋಸ್ಟ್‌ಗೆ ಕೇರಳದಲ್ಲಿ ಭರೀ ಆಕ್ರೋಶ ವ್ಯಕ್ತವಾಗಿತ್ತು. ವಿಮಾನ ದುರಂತದಲ್ಲಿ ಸಾವಿಗೀಡಾದ ನರ್ಸ್ ಕುರಿತು ಅಧಿಕಾರಿಯೊಬ್ಬರ ವ್ಯಂಗ್ಯ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಬಗ್ಗೆ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರಿಗೂ ಸಾಮಾಜಿಕ ಜಾಲತಾಣಗಳ ಮೂಲಕ ದೂರನ್ನು ನೀಡಲಾಗಿತ್ತು. ಇದರ ಬೆನ್ನಲ್ಲೇ ಕಾಸರಗೋಡು ಜಿಲ್ಲಾಧಿಕಾರಿ ಕೆ.ಇಂಬಶೇಖರನ್ ಪವಿತ್ರನ್ ಅವರನ್ನು ಅಮಾನತು ಮಾಡಿ ಆದೇ ಹೊರಡಿಸಲಾಗಿದೆ.
Comments are closed.