Mangaluru : 15 ವರ್ಷಗಳ ಹಿಂದೆ ಮಂಗಳೂರಲ್ಲಿ ವಿಮಾನ ದುರಂತ – ಕೊನೆಗೂ ಪತ್ತೆಯಾಗಲಿಲ್ಲ ಆ 12 ಮೃತ ದೇಹಗಳ ಗುರುತು!!

Share the Article

Mangaluru: ಗುಜರಾತ್​​ನ ಅಹ್ಮದಾಬಾದ್​​ನಲ್ಲಿ ಏರ್ ಇಂಡಿಯಾದ ವಿಮಾನ ಅಪಘಾತಕ್ಕೊಳಗಾಗಿ 242 ಮಂದಿ ಬಲಿಯಾಗಿದ್ದಾರೆ. ಭಾರತದಲ್ಲಿ ಸಂಭವಿಸಿರುವ ಹಲವು ಅಪಘಾತಗಳ ಸಾಲಿಗೆ ಇದು ಸೇರ್ಪಡೆಯಾಗಿದೆ. ಇನ್ನು ಕಳೆದ ಹದಿನೈದು ವರ್ಷಗಳ ಹಿಂದೆ ಮಂಗಳೂರಿನಲ್ಲಿ ನಡೆದ ವಿಮಾನ ಅಪಘಾತ ದುರ್ಘಟನೆಯೂ (2010 Mangalore plane crash incident) ಕೂಡ ಜನಮಾನಸದಿಂದ ಎಂದೂ ಮರೆಯಲಾಗದ ಕಹಿ ನೆನಪಾಗಿ ಉಳಿದಿದೆ.

ಹೌದು, ಮಂಗಳೂರಿನ ಬಜಪೆ ವಿಮಾನ ನಿಲ್ದಾಣದಲ್ಲಿ 2010ರ ಮೇ 22ರಂದು ಏರ್ ಇಂಡಿಯಾ ಎಕ್ಸ್​ಪ್ರೆಸ್ ಫ್ಲೈಟ್ 812 ಅಪಘಾತಗೊಂಡಿತ್ತು. ಅದು ಬೋಯಿಂಗ್ 737-8ಎಚ್​ಜಿ ವಿಮಾನ. ಅಂದು ಬೆಳಗ್ಗೆ 6 ಗಂಟೆ ಸುಮಾರಿಗೆ ಸಂಭವಿಸಿದ ಅಪಘಾತದಲ್ಲಿ 158 ಮಂದಿ ದುರ್ಮರಣ ಅಪ್ಪಿದ್ದರು. ​ದುಬೈ ಇಂಟರ್ನ್ಯಾಷನಲ್ ಏರ್​​ಪೋರ್ಟ್​​ನಿಂದ ಆ ವಿಮಾನ ಮಂಗಳೂರಿಗೆ ಬಂದಿತ್ತು. ಆರು ಮಂದಿ ಸಿಬ್ಬಂದಿ ಹಾಗೂ 160 ಮಂದಿ ಪ್ರಯಾಣಿಕರು ಸೇರಿ 166 ಮಂದಿ ಆ ವಿಮಾನದಲ್ಲಿದ್ದರು. ಇವರಲ್ಲಿ ಎಂಟು ಮಂದಿ ಪ್ರಯಾಣಿಕರು ಬಿಟ್ಟು ಉಳಿದೆಲ್ಲಾ 158 ಮಂದಿ ಅಸು ನೀಗಿದ್ದರು.

ಈ ಕೇಸ್ ನಲ್ಲೂ ಕೂಡ ಮೃತದೇಹಗಳ ಗುರುತು ಪತ್ತೆಹೊಚ್ಚೋದು ಸವಾಲಾಗಿ ಪರಿಣಮಿಸಿತ್ತು.ಹೀಗಾಗಿಮೃತ 12 ಮಂದಿಯ ಗುರುತು ಪತ್ತೆ ಹಚ್ಚಲು ಸಾಧ್ಯವಾಗಲೇ ಇಲ್ಲ. ಈ ದುರಂತದಲ್ಲಿ ಮೃತಪಟ್ಟ 158 ಜನ ಪೈಕಿ22 ಜನರ ಗುರುತು ಪತ್ತೆ ಮಾಡಲು ಸಾಧ್ಯವಾಗದ ಕಾರಣ DNA ಪರೀಕ್ಷೆ ಮಾಡಲಾಯಿತು. ಅಂತಿಮವಾಗಿ ಈ 22 ಮಂದಿಯಲ್ಲಿ 10 ಜನರ ಗುರುತು ಪತ್ತೆ ಮಾಡಲು ಮಾತ್ರ ಸಾಧ್ಯವಾಗಿತ್ತು.ಆದ್ರೆ ಉಳಿದ 12 ಜನರ ಮೃತದೇಹದ ಐಡೆಂಟಿಫಿಕೇಷನ್ ಸಾಧ್ಯವಾಗದೇ ಕುಟುಂಬಸ್ಥರ ಅನುಮತಿ ಪಡೆದು ಸರ್ಕಾರಿ ಗೌರವದೊಂದಿಗೆ ಸಾಮೂಹಿಕ ಅಂತ್ಯಕ್ರಿಯೆ ನೆರವೇರಿಸಲಾಗಿತ್ತು.

Comments are closed.