Flight Crash: ಅಹಮದಾಬಾದ್ ವಿಮಾನ ಪತನ – ಕೇವಲ 10 ನಿಮಿಷಗಳ ಅಂತರದಲ್ಲಿ ಫ್ಲೈಟ್ ತಪ್ಪಿಸಿಕೊಂಡು ಜೀವ ಉಳಿಸಿಕೊಂಡ ಅದೃಷ್ಟವಂತ ಮಹಿಳೆ!!

Share the Article

Flight crash : ಅಹಮದಾಬಾದ್ ವಿಮಾನ ನಿಲ್ದಾಣದಿಂದ ಟೇಕಾಫ್ ಆದ ಕೆಲವೇ ಹೊತ್ತಿನಲ್ಲಿ 242 ಪ್ರಯಾಣಿಕರಿದ್ದ ವಿಮಾನ ಪತನಗೊಂಡಿದ್ದು, ಘಟನೆಯಲ್ಲಿ 242 ಪ್ರಯಾಣಿಕರಲ್ಲಿ 241 ಮಂದಿ ಸಾವನ್ನಪ್ಪಿದ್ದು, ಅದೃಷ್ಟವಶಾತ್ ಒರ್ವ ಪ್ರಯಾಣಿಕೆ ಬದುಕುಳಿದಿದ್ದಾನೆ ಎಂದು ವರದಿಯಾಗಿತ್ತು. ಈ ಬೆನ್ನಲ್ಲೇ ಮತ್ತೊಬ್ಬ ಪ್ರಯಾಣಿಕರು ಪವಾಡ ಸದೃಶದಿಂದ ಪಾರಾಗಿದ್ದಾರೆ ಎಂಬುದು ಬಳಯಾಗಿದೆ.

ಹೌದು, ಅಹಮದಾಬಾದ್ ನ ಏರ್ ಪೋರ್ಟ್ ನಿಂದ ಲಂಡನ್ ಗೆ ತೆರಳುತ್ತಿದ್ದ ಏರ್ ಇಂಡಿಯಾ AI-171 ವಿಮಾನ ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ಪತನಗೊಂಡಿದೆ. ವಿಮಾನದಲ್ಲಿದ್ದ 242 ಜನರಲ್ಲಿ ಇದೀಗ ಇಬ್ಬರು ಪ್ರಯಾಣಿಕರು ಬಚಾವ್ ಆಗಿದ್ದಾರೆ. ಈಗಾಗ್ಲೇ ಓರ್ವ ಪ್ರಯಾಣಿಕ 38 ವರ್ಷದ ರಮೇಶ್ ಪವಾಡ ರೀತಿಯಲ್ಲಿ ಬದುಕುಳಿದಿದ್ದಾರೆ ಎಂದು ತಿಳಿದುಬಂದಿತ್ತು. ಇದೀಗ ಏರ್ ಇಂಡಿಯಾ ವಿಮಾನ AI-171 ಅಪಘಾತಕ್ಕೀಡಾದ ಕೆಲವೇ ನಿಮಿಷಗಳ ಮೊದಲು, ಭೂಮಿ ಚೌಹಾಣ್ ಎಂಬ ಮಹಿಳೆ ಟ್ರಾಫಿಕ್‌ನಲ್ಲಿ ಸಿಲುಕಿಕೊಂಡಿದ್ದರಿಂದ ಕೇವಲ 10 ನಿಮಿಷಗಳ ಅಂತರದಲ್ಲಿ ವಿಮಾನವನ್ನು ತಪ್ಪಿಸಿಕೊಂಡರು ಎಂದು ಖಾಸಗಿ ವಾಹಿನಿಯೊಂದು ವರದಿ ಮಾಡಿದೆ.

ಅಂದಹಾಗೆ ಮಧ್ಯಾಹ್ನ 1:30 ರ ಸುಮಾರಿಗೆ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಡೆ ಹೊರಟಿದ್ದ ಚೌಹಾಣ್, ಸಂಚಾರ ದಟ್ಟಣೆಯಿಂದಾಗಿ ಕೇವಲ 8 ನಿಮಿಷಗಳ ಅಂತರದಲ್ಲಿ ವಿಮಾನ ತಪ್ಪಿಸಿಕೊಂಡರು. ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಮಧ್ಯಾಹ್ನ 1:38ಕ್ಕೆ ವಿಮಾನ ನಿಲ್ದಾಣದ ಆಸುಪಾಸಿನ ವಸತಿ ಪ್ರದೇಶದಲ್ಲಿ ಅಪಘಾತಕ್ಕೀಡಾಯಿತು. ನನ್ನ ಮನಸ್ಸು ಸಂಪೂರ್ಣವಾಗಿ ಖಾಲಿಯಾಗಿದೆ. ನಾನು ದೇವರಿಗೆ ಕೃತಜ್ಞಳಾಗಿದ್ದೇನೆ. ಗಣಪತಿ ಬಪ್ಪಾ ನನ್ನನ್ನು ಕಾಪಾಡಿದರು ಎಂದು ಅವರು ಭಾವುಕರಾಗಿ ಹೇಳಿದರು.

ಲಂಡನ್‌ನಲ್ಲಿ ತಮ್ಮ ಪತಿಯೊಂದಿಗೆ ವಾಸಿಸುತ್ತಿರುವ ಭೂಮಿ ಚೌಹಾಣ್, ಎರಡು ವರ್ಷಗಳ ನಂತರ ರಜೆಗಾಗಿ ಭಾರತಕ್ಕೆ ಆಗಮಿಸಿದ್ದರು. ಆದರೆ ಮತ್ತೆ ಮರಳಿ ಪ್ರಯಾಣಿಸುವಾಗ ಆ ಹತ್ತು ನಿಮಿಷಗಳ ತಡವಾದ ಕಾರಣದಿಂದಾಗಿ ನಾನ ವಿಮಾನವನ್ನು ತಪ್ಪಿಸಿಕೊಂಡರು. ಈ ಘಟನೆ ಬಗ್ಗೆ ಹೇಗೆ ವಿವರಿಸಬೇಕು ಎಂಬುದೇ ತೋಚುತ್ತಿಲ್ಲ. ಮಾತು ಬರುತ್ತಿಲ್ಲ. ಅಕ್ಷರಶಃ ನಾನೀಗ ಖಾಲಿಯಾಗಿದ್ದೇನೆ’ ಎಂದು ಅವರು ತಮ್ಮ ಅದೃಷ್ಟಕ್ಕೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

Mangaluru Plane Crash: ಮಂಗಳೂರು ವಿಮಾನ ದುರಂತಕ್ಕೆ 15 ವರ್ಷ, ಅಂದು ಪೈಲಟ್ ಗ್ಲುಸಿಕಾ ಮಾಡಿದ್ದ ತಪ್ಪೇನು?

Comments are closed.