Nayana: ಎದೆಯ ಮೇಲೆ ಸ್ಪೆಷಲ್ ಟ್ಯಾಟು ಹಾಕಿಸಿಕೊಂಡ ಕಾಮಿಡಿ ಕಿಲಾಡಿ ನಯನ – ಯಾರ ಹೆಸರು ಗೊತ್ತಾ? ಇಲ್ಲಿದೆ ವಿಡಿಯೋ

Nayana : ಕಾಮಿಡಿ ಕಿಲಾಡಿ ನಯನ ಇದು ಈಗ ಟ್ಯಾಟು ವಿಚಾರಕ್ಕೆ ಸುದ್ದಿಯಾಗಿದ್ದಾರೆ. ಅರೆ.. ಟ್ಯಾಟು ಅನ್ನು ಎಲ್ಲರೂ ಹಾಕಿಸಿಕೊಳ್ಳುತ್ತಾರೆ ಇದರಲ್ಲಿ ಏನು ವಿಶೇಷ ಎಂದು ನೀವು ಕೇಳಬಹುದು. ನಯನ ಅವರು ಎದೆಯ ಮೇಲೆ ಟ್ಯಾಟು ಹಾಕಿಸಿಕೊಂಡಿರುವುದೇ ಇಲ್ಲಿರೋ ವಿಶೇಷ.
https://www.instagram.com/reel/DKmUBZCJngn/?igsh=MW9lYnUxYXg2d2dxMQ==
ಹೌದು, ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ಮೂಲಕ ನಯನಾ (Nayana) ಸಾಕಷ್ಟು ಜನಪ್ರಿಯರಾದರು. ಅದ್ಭುತ ನಟನೆಯ ಮೂಲಕ ನಯನಾ ಅಭಿಮಾನಿಗಳ ಮನಗೆದ್ದರು. ಇದೀಗ ಅವರು ಇದರ ಮಧ್ಯೆ ತನ್ನ ಎದೆಯ ಮೇಲೆ ವಿಶೇಷ ಟ್ಯಾಟೂ ಹಾಕಿಸಿಕೊಂಡು ನಯನಾ ಸುದ್ದಿಯಲ್ಲಿದ್ದಾರೆ. ಹಾಗಿದ್ರೆ ನಯನ ಎದೆಯ ಮೇಲೆ ಹಾಕಿಸಿಕೊಂಡ ಟ್ಯಾಟೋ ಯಾರದ್ದು?
ನಯನ ಅವರು ಶರತ್ ಹಾಗೂ ಅವಿನ್ಯಾ ಎಂಬ ಹೆಸರನ್ನು ಬರೆದು ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಜೊತೆಗೆ ಕೃಷ್ಣನ ಕೊಳಲನ್ನು ಸಹ ಟ್ಯಾಟೂ ಹಾಕಿಸಿದ್ದಾರೆ. ಶರತ್ ನಯನಾ ಅವರ ಗಂಡನ ಹೆಸರು ಮತ್ತು ಅವಿನ್ಯಾ ಈ ದಂಪತಿಯ ಮುದ್ದಿನ ಮಗುವಿನ ಹೆಸರಾಗಿದೆ. ತನ್ನ ಎರಡು ಜೀವಗಳನ್ನು ನಯನಾ ಟ್ಯಾಟೂ ಹಾಕಿಸಿಕೊಂಡಿದ್ದಾರೆ.
ಇನ್ನು ಕಳೆದ ಐದು ವರ್ಷಗಳ ಹಿಂದೆ ಬೆಂಗಳೂರಿನ ಉದ್ಯಮಿ ಶರತ್ ಎಂಬವವರ ಜೊತೆ ನಯನಾ ಸರಳವಾಗಿ ಮದುವೆಯಾದರು. ಬಳಿಕ 2023 ರಲ್ಲಿ ಈ ಜೋಡಿ ಮೊದಲ ಮಗುವನ್ನು ಬರಮಾಡಿಕೊಂಡಿತು. ನಯನಾ ಹಾಗೂ ಶರತ್ 9 ವರ್ಷಗಳ ಕಾಲ ಪ್ರೀತಿಸಿ, ಮದುವೆಯಾದವರು.
Comments are closed.