NEET PG 2025: ಒಂದೇ ಶಿಫ್ಟ್‌ನಲ್ಲಿ ಪರೀಕ್ಷೆ ನಡೆಸಲು ಸುಪ್ರೀಂ ಸೂಚನೆ

Share the Article

NEET PG 2025: ನೀಟ್‌ ಪಿಜಿ 2025 ಪರೀಕ್ಷೆ ಜೂನ್‌ 15 ರಂದು ನಿಗದಿಯಾಗಿದ್ದು, ಇದನ್ನು ಎರಡು ಪಾಳಿಗಳ ಬದಲಿಗೆ ಒಂದೇ ಪಾಳಿಯಲ್ಲಿ ನಡೆಸಲು ಸುಪ್ರೀಂ ಕೋರ್ಟ್‌ ಶುಕ್ರವಾರ ಎನ್‌ಬಿಇಗೆ ಸೂಚನೆ ನೀಡಿದೆ.

ಎರಡು ಶಿಫ್ಟ್‌ಗಳಲ್ಲಿ ಪರೀಕ್ಷೆ ಮಾಡುವ ನಿರ್ಧಾರವನ್ನು ಪರೀಕ್ಷಾ ಮಂಡಳಿ ತೆಗೆದುಕೊಂಡಿತ್ತು. ʼಒಂದೇ ಪಾಳಿಯಲ್ಲಿ ಪರೀಕ್ಷೆ ನಡೆಸಲು ಪರೀಕ್ಷಾ ಕೇಂದ್ರಗಳ ಕೊರತೆ ಆಗಬಹುದು. ಹೆಚ್ಚುವರಿ ವೀಕ್ಷಕರ ನಿಯೋಜನೆ ಹಾಗೂ ಸುಗಮ ಪರೀಕ್ಷೆ ಕಷ್ಟವಾಗಬಹುದುʼ ಎಂದು ಎರಡು ಶಿಫ್ಟ್‌ ನಿರ್ಧಾರಕ್ಕೆ ಕಾರಣವನ್ನು ನೀಡಿತ್ತು. ಇದನ್ನು ಪ್ರಶ್ನೆ ಮಾಡಿ ಅರ್ಜಿಯೊಂದು ಕೋರ್ಟಿಗೆ ಸಲ್ಲಿಕೆ ಮಾಡಲಾಗಿತ್ತು.

ಇದರ ವಿಚಾರಣೆ ನಡೆಸಿದ ಪೀಠ, ಬಹು ಶಿಫ್ಟ್‌ಗಳಲ್ಲಿ ಪರೀಕ್ಷೆ ನಡೆಸುವುದು ವ್ಯತ್ಯಾಸಗಳಿಗೆ ಕಾರಣವಾಗಬಹುದು. ಇದರಿಂದಾಗಿ ಅಭ್ಯರ್ಥಿಗಳಲ್ಲಿ ಅನ್ಯಾಯ ಹಾಗೂ ತಾರತಮ್ಯದ ಭಾವನೆ ಉಂಟಾಗಬಹುದು. ದೇಶದಲ್ಲಿನ ತಾಂತ್ರಿಕ ಪ್ರಗತಿ ಗಮನಿಸಿದರೆ ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸಲು ಸಾಕಷ್ಟು ಕೇಂದ್ರಗಳಿಲ್ಲ ಎಂಬುವುದನ್ನು ಒಪ್ಪಲಾಗದುʼ ಎಂದು ಅಭಿಪ್ರಾಯ ಪಟ್ಟು ಒಂದೇ ಪಾಳಿಯ ಪರೀಕ್ಷೆಗೆ ಸೂಚನೆ ನೀಡಿದೆ.

 

 

Comments are closed.