Summer Holiday: ಹೊಸ ಶೈಕ್ಷಣಿಕ ವರ್ಷ ಆರಂಭ ಯಾವಾಗ? ಬೇಸಗೆ ರಜೆ ವಿಸ್ತರಣೆ ಎಂಬ ಸುದ್ದಿಗೆ ಸ್ಪಷ್ಟನೆ

Udupi: ಶಾಲಾ ಮಕ್ಕಳ ಬೇಸಗೆ ರಜೆ ಮೇ 28 ಕ್ಕೆ ಪೂರ್ಣಗೊಳಲ್ಲಿದೆ. ಹಾಗಾಗಿ ಶೈಕ್ಷಣಿಕ ಚಟುವಟಿಕೆಗಳು ಮೇ 29 ರಿಂದ ಪ್ರಾರಂಭಗೊಳ್ಳಲಿದೆ.
ಬೇಸಗೆ ರಜೆ ವಿಸ್ತರಣೆಗೊಂಡಿದೆ ಎಂಬ ಸುಳ್ಳು ಸಂದೇಶಗಳನ್ನು ಕೆಲವರು ಹರಿಬಿಟ್ಟಿದ್ದು, ಪಾಲಕ, ಪೋಷಕರು ಸಹಿತ ಮಕ್ಕಳು ಗೊಂದಲಗೊಂಡಿದ್ದರು.
ಕೆಲವೆಡೆ ಜುಲೈ 15 ರವರೆಗೂ ರಜೆಯಿದೆ. ಬೇರೆ ರಾಜ್ಯಗಳಲ್ಲೂ ಬೇಸಗೆ ರಜೆ ವಿಸ್ತರಣೆಗೊಂಡಿದೆ. ಇದು ರಾಜ್ಯ ಪಠ್ಯಕ್ರಮ, ಸಿಬಿಎಸ್‌ಇ, ಐಸಿಎಸ್‌ಇ ಹೀಗೆ ಎಲ್ಲ ಬೋರ್ಡ್‌ಗಳ ಸರಕಾರಿ, ಖಾಸಗಿ ಶಾಲೆಗೆ ಅನ್ವಯವಾಗುತ್ತದೆ ಎಂಬ ಸುಳ್ಳು ಸಂದೇಶವನ್ನು ಸಾಮಾಜಿಕ ಜಾಲತಾಣದಲ್ಲಿ ಕೆಲವರು ಹರಿ ಬಿಟ್ಟಿದ್ದಾರೆ. ಆದರೆ ವಾಸ್ತವದಲ್ಲಿ ಬೇಸಗೆ ರಜಾವಧಿಯಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಪೂರ್ವ ನಿಗದಿಯಂತೆ ಮೇ 29 ರಿಂದಲೇ ಶೈಕ್ಷಣಿಕ ವರ್ಷ ಆರಂಭವಾಗಲಿದೆ ಎಂದು ಶಿಕ್ಷಣ ಇಲಾಖೆ ಸ್ಪಷ್ಟಪಡಿಸಿದೆ.
2025-26 ನೇ ಶೈಕ್ಷಣಿಕ ವರ್ಷ ಮೇ 29 ರಿಂದ 2026 ರ ಎಪ್ರಿಲ್‌ವರೆಗೂ ಇರಲಿದೆ. ವರ್ಷದ 365 ದಿನಗಳಲ್ಲಿ ಮಧ್ಯವಧಿ/ದಸರಾ ರಜೆ, ಬೇಸಗೆ ರಜೆ ಸಹಿತ 123 ರಜಾ ದಿನಗಳು ಹಾಗೂ 242 ಶಾಲಾ ಚಟುವಟಿಕೆಯ ದಿನಗಳು ಇರಲಿದೆ.
Comments are closed.