Uppinangady: ಉಪ್ಪಿನಂಗಡಿ: ಶ್ರೀ ಸಹಸ್ರಲಿಂಗೇಶ್ವರ ದೇವಾಲಯದ ಬಸವ ಹೃದಯಾಘಾತಕ್ಕೆ ಬಲಿ!

Uppinangady: ಉಪ್ಪಿನಂಗಡಿ ಯ (Uppinangady) ಪುರಾಣ ಪ್ರಸಿದ್ದ ಶ್ರೀ ಸಹಸ್ರಲಿಂಗೇಶ್ವರ ದೇವಾಲಯದ ಉತ್ಸವಾದಿಗಳಲ್ಲಿ ಭಾಗವಹಿಸುತ್ತಿದ್ದ ಬಸವ ಹೃದಯಾಘಾತಕ್ಕೀಡಾಗಿ ಶನಿವಾರ ಮೇ 17 ರಂದು ಮಧ್ಯಾಹ್ನದ ವೇಳೆ ಮೃತಪಟ್ಟಿದೆ.
ದೇವಾಲಯದ ಉತ್ಸಾವಾದಿ ಕಾರ್ಯಗಳಲ್ಲಿ ಬೆಳ್ಳಿ ಆಭರಣಗಳನ್ನು ಧರಿಸಿ ದೇವರ ಮುಂದೆ ಸಾಗುತ್ತಿದ್ದ ದೃಶ್ಯವೇ ಮನಮೋಹಕವಾಗಿದ್ದು, ಭಕ್ತಾದಿಗಳ ಆಕರ್ಷಣೆಗೆ ಒಳಗಾಗಿತ್ತು.
ಎಂದಿನಂತೆಯೇ ಲವಲವಿಕೆಯಲ್ಲಿದ್ದ ಬಸವ ಮಧ್ಯಾಹ್ನ 12.00 ಗಂಟೆ ಸುಮಾರಿಗೆ ಕುಸಿದು ಬಿದ್ದು ಸಾವನ್ನಪ್ಪಿದೆ. ಭೀಮಗಾತ್ರದ ಈ ಬಸವನ ಮೃತ ದೇಹವನ್ನು ಕ್ರೇನ್ ಸಹಾಯದಿಂದ ಸ್ಥಳಾಂತರಿಸಿ ಅಂತ್ಯ ಸಂಸ್ಕಾರಕ್ಕೆ ಒಳಪಡಿಸಲಾಯಿತು.
Comments are closed.