Teachers Recruitment: ಶಿಕ್ಷಕರ ನೇಮಕಾತಿ ಕುರಿತು ಸಚಿವ ಮಧು ಬಂಗಾರಪ್ಪರಿಂದ ಮಹತ್ವದ ಮಾಹಿತಿ

Teachers Recruitment: ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಶಿಕ್ಷಕರ ನೇಮಕಾತಿ ಕುರಿತು ಮಹತ್ವದ ಮಾಹಿತಿಯನ್ನು ನೀಡಿದ್ದಾರೆ. ನ್ಯಾ. ನಾಗಮೋಹನದಾಸ್ ಆಯೋಗದ ಪರಿಶಿಷ್ಟ ಜಾತಿ ಸಮೀಕ್ಷಾ ವರದಿ ಬಂದ ಮರುದಿನವೇ ಶಿಕ್ಷಕರ ನೇಮಕಕ್ಕೆ ನೋಟಿಫಿಕೇಶನ್ ಹೊರಡಿಸಲಾಗುತ್ತದೆ ಎಂದು ಹೇಳಿದ್ದಾರೆ.
ಕಲ್ಯಾಣ ಕರ್ನಾಟಕ ಭಾಗಕ್ಕೆ 5,600, ಇನ್ನುಳಿದೆಡೆ 500 ಹಾಗೂ 2016-2020ರ ವರೆಗೆ ಅನುದಾನಿತ ಶಾಲೆಗಳ ಶಿಕ್ಷಕರ ಭರ್ತಿಗೆ ಅವಕಾಶ ನೀಡಲಾಗುತ್ತದೆ. ಸರಕಾರಿ ಶಾಲೆ ಶಿಕ್ಷಕರ ಮಕ್ಕಳು ಸರಕಾರಿ ಶಾಲೆಯಲ್ಲೇ ಕಲಿಯಬೇಕು ಎನ್ನುವ ಕಾನೂನು ಇಲ್ಲ. ಶಿಕ್ಷಣಕ್ಕೆ ಯಾವುದೇ ಲಿಮಿಟೇಶನ್ ಇಲ್ಲ. ಖಾಸಗಿಯವರ ವಿರುದ್ಧವಾಗಿ ಶಿಕ್ಷಣ ಇಲಾಖೆ ನಡೆಸಲಾಗುವುದಿಲ್ಲ ಎಂದು ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತಾ ಹೇಳಿದರು.
Comments are closed.