Udupi: ಮಹಿಳೆಗೆ ತ್ರಿವಳಿ ತಲಾಕ್ ನೀಡಿ ಇನ್ನೊಂದು ಮದುವೆಗೆ ಸಿದ್ಧನಾದ ಗಂಡ! ದೂರು ದಾಖಲು!

Share the Article

Udupi: ಮದುವೆಯಾಗಿ ಹನ್ನೆರಡು ವರ್ಷಗಳ ನಂತರ ಗಂಡ ತನಗೆ ತ್ರಿವಳಿ ತಲಾಕ್ ನೀಡಿ ಬೇರೆ ಮದುವೆಯಾಗಲು ಸಿದ್ಧತೆ ಮಾಡಿಕೊಂಡಿರುವುದಾಗಿ ಬ್ರಹ್ಮಾವರದ ಹಾರಾಡಿ ಗ್ರಾಮದ ಮಹಿಳೆ ದೂರಿನ ಮೇರೆಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಿಫಾ ಎಂಬ ಮಹಿಳೆ, ದಿನಾಂಕ 24/05/2013 ರಂದು ಮೊಹಮ್ಮದ್ ಹಾರೀಸ್ ರವರನ್ನು ಮುಸ್ಲಿಂ ಸಂಪ್ರದಾಯದಂತೆ ಮದುವೆಯಾಗಿ ಅವರಿಗೆ 10 ವರ್ಷದ ಮಗನಿರುತ್ತಾನೆ. ಪ್ರಸ್ತುತ ಪತಿ ಓಮನ್ ದೇಶದಲ್ಲಿ ನೌಕರಿಯಲ್ಲಿದ್ದು, ಗಂಡನ ಮನೆಯಲ್ಲಿನವರು ಸೇರಿ ಪಿತೂರಿ ಮತ್ತು ಚಾಡಿ ಮಾತುಗಳಿಂದ ಪತಿಯು ಜಗಳ ಮಾಡುತ್ತಿದ್ದರು.

ದಿನಾಂಕ 09/12/2024 ರಂದು ಪತಿಯು ಪತ್ನಿಯ ಮನೆಗೆ, ಅವರು ಕೆಲಸ ಮಾಡುವ ಶಾಲೆಗೆ ಹಾಗೂ ಅವರ ಹೊನ್ನಾಳದ ಜಮಾತ್ ಗೆ ಕಾನೂನು ಬಾಹಿರವಾಗಿ ಹಾಗೂ ಪತ್ನಿಯ ಇಚ್ಚೆಗೆ ವಿರುದ್ಧವಾಗಿ ತ್ರಿವಳಿ ತಲಾಖ್ ನೀಡಿರುವ ಬಗ್ಗೆ ನೊಂದಾಯಿತ ಪತ್ರ ಕಳುಹಿಸಿ, ಈಗ ಬೇರೆ ಮದುವೆ ಆಗಲು ಸಂಪೂರ್ಣ ತಯಾರಿ ಮಾಡಿಕೊಂಡಿರುವುದಾಗಿ ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 112/2025 ಕಲಂ: 85 ಜೊತೆಗೆ 3(5) BNS & 4 The Muslim Women(Protection of Rights on Marriage) Act ರಂತೆ ಪ್ರಕರಣ ದಾಖಲಾಗಿರುತ್ತದೆ.

Comments are closed.