Puttur: ಪುತ್ತೂರು: ಕೋಮುದ್ವೇಷ ಭಾಷಣ: ಭರತ್ ಕುಮ್ಡೇಲು ವಿರುದ್ಧ ಪ್ರಕರಣ ದಾಖಲು

Puttur: ಕೋಮುದ್ವೇಷದ ಭಾಷಣ ಮಾಡಿ ಸಾರ್ವಜನಿಕ ಶಾಂತಿ ಕದಡಿದ ಪ್ರಕರಣ ಸಂಬಂಧ ಭರತ್ ಕುಮ್ಡೇಲು ವಿರುದ್ಧ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಹಾಸ್ ಶೆಟ್ಟಿಗೆ ಪುತ್ತೂರಿನ ಬೈಪಾಸ್ ರಸ್ತೆ ಬಳಿಯ ಜೈನ ಭವನದಲ್ಲಿ ನುಡಿನಮನ ಕಾರ್ಯಕ್ರಮವನ್ನು ಗುರುವಾರ ಸಂಜೆ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಆಯೋಜನೆ ಮಾಡಿತ್ತು. ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಕುಮ್ಡೇಲು, ಕೋಮು ದ್ವೇಷವನ್ನು ಪ್ರಚೋದಿಸುವ ಭಾಷಣ ಮಾಡಿರುವ ಆರೋಪವಿದೆ. ಇದು ಸಾರ್ವಜನಿಕ ನೆಮ್ಮದಿಗೆ ಭಂಗ ಉಂಟಾಗುವ ಸಾಧ್ಯತೆಯಿದೆ ಎಂದು ಆರೋಪ ಮಾಡಲಾಗಿದೆ.
ಈ ಕುರಿತು ಪುತ್ತೂರು ಪೊಲೀಸರು ಸ್ವಯಂ ಪ್ರೇರಿತವಾಗಿ ದೂರು ದಾಖಲು ಮಾಡಿದ್ದಾರೆ.
Comments are closed.