Anand Guruji: ‘ನಿಮ್ಮ ಸೆ*ಕ್ಸ್ ವೀಡಿಯೊ ಇದೆ’ ಆನಂದ್ ಗುರೂಜಿಗೆ ಬ್ಲಾಕ್ ಮೇಲ್, ಕೊಲೆ ಬೆದರಿಕೆ – ದಿವ್ಯ ವಸಂತ ಸೇರಿ ಇಬ್ಬರ ವಿರುದ್ಧ FIR

Anand Guruji: ಖಾಸಗಿ ಸುದ್ದಿ ವಾಹಿನಿಯಲ್ಲಿ ಪ್ರತಿನಿತ್ಯವೂ ಕೂಡ ಜನರ ಭವಿಷ್ಯವನ್ನು ನುಡಿಯುತ್ತಾ, ಕಷ್ಟಗಳಿಗೆ ಪರಿಹಾರವನ್ನು ಹುಡುಕಿ ಕೊಡುವ ನಾಡಿನ ಖ್ಯಾತ ಆನಂದ ಗುರೂಜಿ ಅವರಿಗೆ ಬ್ಲಾಕ್ ಮೇಲ್ ಮಾಡಿ ಹಣಕ್ಕೆ ಡಿಮ್ಯಾಂಡ್ ಮಾಡಲಾಗಿದೆ ಹಾಗೂ ಕೊಲೆ ಬೆದರಿಕೆ ಒಡ್ಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಚಿಕ್ಕಜಾಲ ಠಾಣೆಗೆ ಆನಂದ್ ಗುರೂಜಿ ಇದೀಗ ದೂರು ನೀಡಿದ್ದಾರೆ. ಆನಂದ್ ಗುರೂಜಿ ದೂರಿನ ಮೇರೆಗೆ ಪೊಲೀಸರು ಇಬ್ಬರ ವಿರುದ್ಧ FIR ದಾಖಲಿಸಿಕೊಂಡಿದ್ದಾರೆ. A1 ಕೃಷ್ಣಮೂರ್ತಿ ಹಾಗು A2 ದಿವ್ಯ ವಸಂತ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಅಂದಹಾಗೆ ನಿಮ್ಮ ಸೆ… ವಿಡಿಯೋ ಇದೆ ಎಂದು ಪ್ರತಿನಿತ್ಯ ಹಣಕ್ಕಾಗಿ ಆರೋಪಿಗಳು ಬ್ಲ್ಯಾಕ್ಮೇಲ್ ಮಾಡುತ್ತಿದ್ದಾರೆ ಎಂದು ಆನಂದ್ ಗುರೂಜಿ ಆರೋಪಿಸಿದ್ದಾರೆ. ಆನಂದ್ ಗುರೂಜಿ ವಿಡಿಯೋ ಮತ್ತು ಜಮೀನು ಖರೀದಿಯ ಬಗ್ಗೆ ಕೋರ್ಟ್ ನಿಂದ ತಡೆಯಾಜ್ಞೆ ತಂದರೂ ಸಹ ಆನಂದ್ ಗುರೂಜಿಗೆ ಬೆದರಿಕೆ ಹಾಕಲಾಗಿದೆ. ಹಣಕ್ಕಾಗಿ ಬೆದರಿಸಿ ಬ್ಲಾಕ್ಮೇಲ್ ಮಾಡಿ ಜೀವ ಬೆದರಿಕೆ ಹಾಕಿರುವ ಆರೋಪ ಕೇಳಿ ಬಂದಿದೆ. ಆನಂದ ಗುರೂಜಿಯ ಕಾರು ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಆರೋಪ ಕೇಳಿ ಬಂದಿದೆ.
Comments are closed.