Chaitra Kundapura: ಎರಡು ಕ್ವಾಟರ್‌ ಕೊಡಿಸಿದರೆ ಯಾರು ಬೇಕಾದರೂ ಒಳ್ಳೆಯವನು ಹೇಳ್ತಾನೆ-ತಂದೆ ಆರೋಪಕ್ಕೆ ಚೈತ್ರಾ ತಿರುಗೇಟು

Share the Article

Chaitra Kundapura: ತನ್ನ ತಂದೆ ಮಾಡಿದ ಆರೋಪಕ್ಕೆ ಪ್ರತಿಯಾಗಿ ಚೈತ್ರಾ ಅವರು ಸ್ಪಷ್ಟನೆ ನೀಡಿದ್ದಾರೆ. “ತಂದೆ ಕುಡುಕ” ಎಂದು ನೇರ ಮಾತುಗಳಲ್ಲಿ ಹೇಳಿದ್ದಾರೆ.

ಚೈತ್ರಾ ಕುಂದಾಪುರ ಅವರ ಮದುವೆ ಅವರ ತಂದೆ ಬಾಲಕೃಷ್ಣ ನಾಯಕ್‌ ಅವರು ಬಂದಿರಲಿಲ್ಲ. ಈ ಕುರಿತು ಬಾಲಕೃಷ್ಣ ಅವರು ನನಗೆ ವಿವಾಹಕ್ಕೆ ಆಮಂತ್ರಣ ನೀಡಿರಲಿಲ್ಲ ಎಂದು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದರು.

“ಕುಡುಕ ತಂದೆಯ ಚಿತ್ರ ಹಿಂಸೆ ಅನುಭವಿಸಿದವರಿಗಷ್ಟೇ ಗೊತ್ತು. ಎಂತಹ ಮಕ್ಕಳಿಗೂ ಕುಡುಕ ತಂದೆ ಸಿಗಬಾರದು. ಎರಡು ಕ್ವಾಟ‌ರ್ ನಾನು ಕೊಟ್ರೆ ನನ್ನ ಮಕ್ಕಳು ದೇವರು ಅನ್ನುವವರ ಮಾತಿಗೆ ಬೆಲೆ ಕೊಡುವವರು ಮೂರ್ಖರಾಗ್ತಾರೆ’ ಎಂದು ಚೈತ್ರಾ ತಮ್ಮ ಇನ್ಸ್‌ಟಾಗ್ರಾಂನಲ್ಲಿ ಬರೆದಿದ್ದಾರೆ.

ಈಗಾಗಲೇ ಚೈತ್ರಾ ತಂದೆ, ʼ ನನ್ನ ಮಗಳ ವಿವಾಹವನ್ನು ನಾನು ಒಪ್ಪುವುದಿಲ್ಲ. ಚೈತ್ರಾ ಹಾಗೂ ಆಕೆಯ ಪತಿ ಇಬ್ಬರೂ ಕಳ್ಳರು. ನನ್ನ ಪತ್ನಿ ಬೆಂಬಲ ಕೂಡಾ ಇದೆ. ಹಣದ ಆಸೆಗೆ ಹೀಗೆ ಮಾಡುತ್ತಿದ್ದಾರೆ. ಗೋವಿಂದ ಬಾಬು ಪೂಜಾರಿ ಪ್ರಕರಣದಲ್ಲೂ ಇವರು ಹಣ ಹಂಚಿದ್ದಾರೆ. ದೊಡ್ಡಮಗಳು ಮಾತ್ರ ನನಗೆ ಆಸರೆಯಾಗಿರುವುದು ʼ ಎಂದು ಹೇಳಿದ್ದಾರೆ.

Comments are closed.