Earth : ಭೂಮಿಯ ಅಂತ್ಯದ ನಿಖರ ದಿನಾಂಕ ಬಹಿರಂಗ !!

Share the Article

Earth: ಭೂಮಿಗೆ ಅಂತ್ಯ ಅನ್ನೋದು ಎಂಬುದು ಹಲವರ ಪ್ರಶ್ನೆ. ಕೆಲವರು ಭೂಮಿ ಸೂರ್ಯ, ಚಂದ್ರ ಇರುವ ತನಕ ಭೂಮಿ ಇದ್ದೇ ಇರುತ್ತದೆ ಎಂದು ವಾದ ಮಾಡುತ್ತಾರೆ. ಆದರೆ ಇದೀಗ ವಿಜ್ಞಾನಿಗಳು ಭೂಮಿಗೂ ಕೂಡ ಅಂತ್ಯವಿದೆ ಎಂದು ಬಹಿರಂಗಪಡಿಸಿದ್ದಾರೆ. ಅಷ್ಟೇ ಅಲ್ಲದೆ ಭೂಮಿಯ ಅಂತ್ಯ ಯಾವಾಗ ಎಂದು ದಿನಾಂಕವನ್ನು ಕೂಡ ತಿಳಿಸಿದ್ದಾರೆ.

ಹೌದು, ವಿಜ್ಞಾನಿಗಳು ಭೂಮಿ ಮೇಲಿನ ಪ್ರತಿಯೊಂದು ಜೀವ ಚರಾಚರಗಳು ಅಂತ್ಯಗೊಳ್ಳುವ ಮೂಲಕ ಭೂಮಿಯೂ ಅಂತ್ಯಗೊಳ್ಳಲಿದೆ ಎಂದು ಟೊಹೋ ವಿಶ್ವವಿದ್ಯಾಲಯದ ಸಂಶೋಧಕರು ತಮ್ಮ ಅಧ್ಯಯನ ವರದಿಯಲ್ಲಿ ಹೇಳಿದ್ದಾರೆ.

ಭೂಮಿ ಅಯಸ್ಸು ಇನ್ನೆಷ್ಟು ದಿನ?

ನಾಸಾ ಗ್ರಹಗಳ ಮಾದರಿ ಸಂಗ್ರಹಿಸಿ ಟೊಹೊ ವಿಶ್ವವಿದ್ಯಾಲಯಗಳ ಸಂಶೋಧಕರು ಅಧ್ಯಯನ ನಡೆಸಿದ್ದಾರೆ. ಸೂಪರ್ ಕಂಪ್ಯೂಟರ್ ಸಿಮ್ಯುಲೇಶನ್ ಅಧ್ಯಯನದಲ್ಲಿ ಭೂಮಿಗೆ ಇನ್ನಿರುವುದು ಸರಿಸುಮಾರು ಒಂದು ಶತಕೋಟಿ ವರ್ಷ ಮಾತ್ರ.

ಭೂಮಿಯ ಅಂತ್ಯ ಹೇಗಾಗುತ್ತೆ?

ಭೂಮಿಯ ತಾಪಮಾನ ಹೆಚ್ಚಾಗುತ್ತಿದೆ. ಇದಕ್ಕೆ ಗ್ಲೋಬಲ್ ವಾರ್ಮಿಂಗ್ ಸೇರಿದಂತೆ ಹಲವು ಮಾಲಿನ್ಯಗಳು, ಕಾಡು ನಾಶ, ಹಸಿರು ನಾಶ, ಗುಡ್ಡ, ಪರ್ವತ ನಾಶ, ಅಭಿವೃದ್ಧಿಹೆಸರಿನಲ್ಲಿ ಭೌಗೋಳಿಕವಾಗಿ ಆಗುತ್ತಿರುವ ಅಸಮತೋಲನಗಳಿಂದ ಭೂಮಿಯ ತಾಪಮಾನ ಹೆಚ್ಚಾಗುತ್ತಿದೆ. ವರ್ಷದಿಂದ ವರ್ಷಕ್ಕೆ ಸೂರ್ಯನ ಬಿಸಿಲು ಪ್ರಖರಗೊಳ್ಳುತ್ತಿದೆ. ಇದು ತಾಪಮಾನದಲ್ಲಿ ಭಾರಿ ವ್ಯತ್ಯಾಸ ಮಾಡುತ್ತಿದೆ. ಒಂದು ಹಂತದವರೆಗೆ ಸೂರ್ಯನ ಬಿಸಿ ತಾಪಮಾನ, ಭೂಮಿಯಲ್ಲಿ ಆಮ್ಲಜನ ಉತ್ಪಾದನೆಗೆ ನೆರವು ನೀಡಲಿದೆ. ಆದರೆ ಪ್ರಮಾಣ ಮೀರಿದಾಗ ಭೂಮಿಯಲ್ಲಿ ಆಮ್ಲಜನಕ ಉತ್ಪತ್ತಿಯಾಗುವುದಿಲ್ಲ. ಅಲ್ಲಿಗೆ ಭೂಮಿಯ ಅಂತ್ಯವಾಗಲಿದೆ ಎಂದು ಈ ಅಧ್ಯಯನ ವರದಿ ಹೇಳುತ್ತದೆ.

Comments are closed.