SEP: ರಾಜ್ಯ ಶಿಕ್ಷಣ ನೀತಿ (SEP) ಈ ಶೈಕ್ಷಣಿಕ ವರ್ಷದಿಂದಲೇ ಜಾರಿ

Share the Article

SEP: ರಾಜ್ಯ ಶಿಕ್ಷಣ ನೀತಿ (ಎಸ್‌ಇಪಿ) ವರದಿ ಸಿದ್ಧವಾಗಿದ್ದು, 2025-26 ನೇ ಸಾಲಿನಿಂದ ಜಾರಿಗೊಳಿಸುವ ಚರ್ಚೆ ನಡೆಯಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್‌ ತಿಳಿಸಿದ್ದಾರೆ.

ಎಸ್‌ಇಪಿ ವರದಿ ಈ ಶೈಕ್ಷಣಿಕ ವರ್ಷದಿಂದ ಜಾರಿಗೆ ಕ್ರಮ ಕೈಗೊಳ್ಳಲಾಗುವುದು. ಮಧ್ಯಂತರ ವರದಿಯ ಶಿಫಾರಸ್ಸಿನ ಮೂಲಕ 4 ವರ್ಷದ ಪದವಿಯನ್ನು ಮೂರು ವರ್ಷಕ್ಕೆ ಕಡಿ ಮಾಡಲಾಗಿದೆ ಎಂದು ಹೇಳಿದ್ದಾರೆ ಎಂದು ವರದಿಯಾಗಿದೆ.

ಎಸ್‌ಇಪಿ ವರದಿ ಆಂಗ್ಲ ಭಾಷೆಯಲ್ಲಿ ಸಿದ್ಧಗೊಂಡಿದೆ. ಅನುವಾದ ಕಾರ್ಯ ಆಗುತ್ತಿದ್ದು, ಬಹಳ ಎಚ್ಚರಿಕೆಯಿಂದ ಅನುವಾದ ಮಾಡಬೇಕಾಗಿದೆ ಎಂದು ಆಯೋಗ ಸಮಯ ಕೇಳಿದೆ. ಕೊನೆಯ ವಾರ ವರದಿ ಸಲ್ಲಿಸಲು ಆಯೋಗ ನಿರ್ಧಾರ ಮಾಡಿದೆ. ಮೇ 25 ರಂದು ನಡೆಯುವ ಸಭೆಯಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಲಾಗಿದೆ.

Comments are closed.