Taliban: ಆಫ್ಘಾನಿಸ್ತಾನದಲ್ಲಿ ಇನ್ಮುಂದೆ ಚೆಸ್ ಆಡುವುದು ಹರಾಂ! ನಿಷೇಧ ವಿಧಿಸಿದ ತಾಲಿಬಾನ್ ಸರ್ಕಾರ!

Taliban: ಆಫ್ಘಾನಿಸ್ತಾನದಲ್ಲಿ ಧಾರ್ಮಿಕ ಕಾರಣಗಳನ್ನು ನೀಡಿ ಚೆಸ್ ಆಟವನ್ನು ನಿಷೇಧಿಸಿ ತಾಲಿಬಾನ್ (Taliban) ಆದೇಶ ಹೊರಡಿಸಿದೆ. ತಾಲಿಬಾನ್ ಸರ್ಕಾರದ ಕ್ರೀಡಾ ಸಚಿವಾಲಯವು ಈ ಸಂಗತಿಯನ್ನು ಧೃಡಪಡಿಸಿದೆ.
ಇಡೀ ದೇಶದಲ್ಲಿ ಚೆಸ್ ಆಟವನ್ನು ಆಡುವುದು, ಆಟಕ್ಕೆ ಸಂಬಂಧಿಸಿದ ವಸ್ತುಗಳ ಮಾರಾಟ, ಬಳಕೆ ಹಾಗೂ ವೀಕ್ಷಣೆಯನ್ನು ನಿಷೇಧಿಸಿರುವುದಾಗಿ ತಾಲಿಬಾನ್ ಹೇಳಿದೆ. ಇಸ್ಲಾಮ್ ಕಾನೂನಿಗೆ ಸಂಬಂಧಿಸಿದಂತೆ ಚೆಸ್ ಆಡುವುದು ಹರಾಂ ಆದ್ದರಿಂದ ಈ ಕ್ರಮ ಕೈಗೊಂಡಿರುವುದಾಗಿ ತಾಲಿಬಾನ್ ವಕ್ತಾರರು ವಿವರಿಸಿದ್ದಾರೆ. ಆದರೆ ಈ ನಿಷೇಧವನ್ನು ಮರುಪರಿಶೀಲನೆಗೆ ಒಳಪಡಿಸುವಂತೆ ತಾಲಿಬಾನ್ ನ ಚೆಸ್ ಆಟಗಾರರು ಮನವಿ ಮಾಡಿಕೊಂಡಿದ್ದಾರೆ.
Comments are closed.