Udupi: ಕಂಟ್ರೋಲ್ ತಪ್ಪಿ ಕಲ್ಲಿಗೆ ಢಿಕ್ಕಿ ಹೊಡೆದು ಸುಟ್ಟು ಭಸ್ಮವಾದ ಬೈಕ್! ಸವಾರನಿಗೆ ಗಂಭೀರ ಗಾಯ!

Udupi: ಯುವಕನೋರ್ವ ಚಲಾಯಿಸುತ್ತಿದ್ದ ಬೈಕ್ ಕಂಟ್ರೋಲ್ ತಪ್ಪಿ ರಸ್ತೆ ಪಕ್ಕದ ಕಲ್ಲಿಗೆ ಢಿಕ್ಕಿ ಹೊಡೆದು ಬೆಂಕಿ ತಗುಲಿ ಬೈಕ್ ಹೊತ್ತಿ ಉರಿದ ಘಟನೆ ಉಡುಪಿಯ (Udupi) ಪಡುಬಿದ್ರೆಯ ಎರ್ಮಾಳು ಗರೋಡಿ ಸಮೀಪ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ.
ಘಟನೆಯಲ್ಲಿ ಬೈಕ್ ಸವಾರ ಎರ್ಮಾಳು ಗುಜ್ಜಿ ನಿವಾಸಿ ಸೈಫಾನ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರು ಪಡುಬಿದ್ರೆ ಕಡೆಯಿಂದ ಎರ್ಮಾಳಿನ ಮನೆಗೆ ಹೋಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಪಡುಬಿದ್ರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Comments are closed.