Pavanje Mela: ಯಕ್ಷಗಾನದಲ್ಲೂ ಕೇಳಿದ ಬಂದ ಅಪರೇಷನ್ ಸಿಂಧೂರ ಮಾತುಗಳು!

Pavanje Mela: ಪಾವಂಜೆ ಮೇಳದಲ್ಲಿ ಕಲಾವಿದ ದಿನೇಶ್ ಶೆಟ್ಟಿ ಅಪರೇಷನ್ ಸಿಂಧೂರದ ಬಗ್ಗೆ ಮಾತನಾಡಿದ ಸಂಭಾಷಣೆಯ ವೀಡಿಯೋವೊಂದು ವೈರಲ್ ಆಗಿದೆ.
ಶಾಸಕ ಸುನಿಲ್ ಕುಮಾರ್ ತಮ್ಮ Sunil kumar karkala ಹೆಸರಿನ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದ್ದು, ಈ ವೀಡಿಯೋದಲ್ಲಿ ಪಾವಂಜೆ ಮೇಳದಲ್ಲಿ ಯಕ್ಷಗಾನ ಕಲಾವಿದ ದಿನೇಶ್ ಶೆಟ್ಟಿ ಅಪರೇಷನ್ ಸಿಂಧೂರದ ಬಗ್ಗೆ ಮಾತನಾಡಲಾಗಿದೆ.
ಈ ಪವಿತ್ರವಾದ ನೆಲದಲ್ಲಿ ನಾನು ಹುಟ್ಟಿದವ. ಪವಿತ್ರವಾದ ಸಂಸ್ಕಾರವನ್ನು ಪಡೆದವ. ಈ ನೆಲಕ್ಕೆ ತಾಯಿಯೆಂದು ನಾವು ಕರೆಯುತ್ತೇವೆ. ತಾಯಿಯೆಂದು ಕರೆಯುವ ಈ ನೆಲ ಇದು ಬಿಟ್ರೆ ಇನ್ನೊಂದಿಲ್ಲ. ಹೀಗಾಗಿ ನಮಗೆ ದೇಶ ಪ್ರೇಮವನ್ನು ಕಲಿಸಿದೆ. ಬಿಟ್ರೆ ದೇಶ ದ್ರೋಹ ಮಾಡುವುದನ್ನು ಕಲಿಸಲಿಲ್ಲ.
ಆಗ ಸ್ತ್ರಿ ವೇಷದಾರಿ, ಈ ತಾಯಿಯ ಸಿಂಧೂರ ಅಳಿಸಲು ಬಂದರೆ ಏನು ಮಾಡೋದು ಎಂದಿದ್ದಾರೆ. ಇದೇ ವೇಳೆ ಕಲಾವಿದ ದಿನೇಶ್ ಶೆಟ್ಟಿ, ತಾಯಿಯ ಸಿಂಧೂರವನ್ನು ಒರೆಸುತ್ತೇನೆಂದು ಬಂದರೆ ಈ ನೆಲದ ಒಬ್ಬಳು ಹೆಣ್ಣಿನ ಸಿಂಧೂರ ಒರೆಸಿದರೆ ವೈರಿಗಳ ಸಾವಿರ ಸಾವಿರ ಮಡದಿದರ ಸಿಂಧೂರ ಅಳಿಸುವುದಕ್ಕೆ ನಾವೆಲ್ಲಾ ಸಿದ್ಧರಾಗಿ ನಿಂತಿದ್ದೇವೆ ಎಂದು ಹೇಳುವುದನ್ನು ನೋಡಬಹುದು.
Comments are closed.