School Holiday: ಭಾರತ-ಪಾಕ್‌ ನಡುವೆ ದಾಳಿ; ಈ ರಾಜ್ಯದ ಶಾಲಾ/ಕಾಲೇಜುಗಳಿಗೆ ರಜೆ ಘೋಷಣೆ!

Share the Article

School Holiday: ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಹಿನ್ನೆಲೆ ಭಾರತೀಯ ಸೇನೆ ಅಪರೇಷನ್‌ ಸಿಂಧೂರ್‌ ನಡೆಸುತ್ತಿರುವ ಕಾರಣ ಮುನ್ನೆಚ್ಚರಿಕೆಯ ಕ್ರಮವಾಗಿ ಹಲವು ರಾಜ್ಯಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ಜಮ್ಮು ಕಾಶ್ಮೀರ: ಯುನಿಯನ್‌ ಟೆರಿಟರಿಯಲ್ಲಿರುವ ಎಲ್ಲಾ ಶಾಲೆಗಳು, ಕಾಲೇಜುಗಳು, ವಿಶ್ವವಿದ್ಯಾಲಯಗಳು ಘರ್ಷಣೆ ಉಲ್ಬಣವಾಗುತ್ತಿರುವ ಕಾರಣ ಮುಂದಿನ ಎರಡು ದಿನಗಳ ಕಾಲ ಬಂದ್‌ ಮಾಡಲಾಗುತ್ತಿದೆ ಎಂದು ಶಿಕ್ಷಣ ಸಚಿವ ಸಕೀನಾ ಇಟು ಹೇಳಿದ್ದಾರೆ.

ಪಂಜಾಬ್‌: ಚಂಡೀಗಡರ ಪಂಜಾಬ್‌ ವಿಶ್ವವಿದ್ಯಾಲಯವು ಮೇ 9,10,12 ರಂದು ಉಲ್ಲೇಖಿತ ಪರೀಕ್ಷೆಗಳನ್ನು ನಿಲ್ಲಿಸಿದೆ. ಮುಂದಿನ ಮೂರು ದಿನಗಳ ಕಾಲ ಎಲ್ಲಾ ಶಾಲೆಗಳು, ಕಾಲೇಜುಗಳು, ವಿಶ್ವವಿದ್ಯಾಲಯಗಳನ್ನು ಬಂದ್‌ ಮಾಡಲು ಆದೇಶಿಸಿದೆ.

ಹರಿಯಾಣ: ಪಂಚಕುಲದಲ್ಲಿ ಎಲ್ಲಾ ಶೈಕ್ಷಣಿಕ ಸಂಸ್ಥೆಗಳು ಶುಕ್ರವಾರ ಮತ್ತು ಶನಿವಾರ ಮುಚ್ಚಲಾಗಿದೆ. ರಾಜ್ಯ ಪೊಲೀಸ್‌ ಸಿಬ್ಬಂದಿ ಮತ್ತು ಆರೋಗ್ಯ ಇಲಾಖೆಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ರಜೆ ರದ್ದು ಮಾಡಲಾಗಿದೆ.

ರಾಜಸ್ಥಾನ್‌: ಶ್ರೀ ಗಂಗಾನರ, ಬಿಡಕನರ್‌, ಜೋಧ್‌ಪುರ, ಜೈಸಲ್‌ಮೆರ ಮತ್ತು ಬಾರ್ಮರ್ನಲ್ಲಿ ಶಾಲೆಗಳನ್ನು ಮುಚ್ಚಲಾಗಿದೆ.

Comments are closed.