Shocking Incident: ಪತ್ನಿಯ ಮೂಗು ಸುಂದರವಾಗಿದೆ ಎಂದು ಕಚ್ಚಿ ತಿಂದ ಗಂಡ!

Shocking Incident: ಮಲಗಿದ್ದ ಪತ್ನಿಯ ಮೂಗು ಸುಂದರವಾಗಿದೆ ಎಂದು ಭಾವಿಸಿ ಪತಿಯೇ ಕಚ್ಚಿ ತಿಂದು ಹಾಕಿದ ವಿಚಿತ್ರ ಘಟನೆಯೊಂದು ಶಾಂತಿಪುರ ಪೊಲೀಸ್ ಠಾಣೆ ವ್ಯಾಪ್ತಿಯ ನಾಡಿಯಾ ಜಿಲ್ಲೆಯಲ್ಲಿ ಈ ಭೀಕರ ಘಟನೆ ನಡೆದಿದೆ.
ತನ್ನ ಹೆಂಡತಿಯ ಮೂಗನ್ನು ಯಾವಾಗಲೂ ಸುಂದರವಾಗಿದೆ ಎಂದು ಹೊಗಳುತ್ತಿದ್ದ ಪತಿರಾಯ ಆಕೆಯ ಆ ಮೂಗನ್ನೇ ಕಚ್ಚಿ ಕಚ್ಚಿ ತಿಂದಿದ್ದಾನೆ.
ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ಶಾಂತಿಪುರ ಪೊಲೀಸ್ ಠಾಣೆ ವ್ಯಾಪ್ತಿಯ ವಾರ್ಡ್ ಸಂಖ್ಯೆ 11 ರ ಬರ್ಪಾರಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಸಂತ್ರಸ್ತೆಯ ತಾಯಿ ರೋಶ್ನಾ ಬೇಗಂ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾದ ನಂತರ ಪೊಲೀಸರು ಬಾಪನ್ ಶೇಖ್ ಅವರನ್ನು ಬಂಧನ ಮಾಡಲಾಗಿದೆ.
Comments are closed.