Shivalik sharma: ಕೇಸ್‌ನಲ್ಲಿ ಕ್ರಿಕೆಟಿಗ ಶಿವಾಲಿಕ್ ಶರ್ಮ ಅರೆಸ್ಟ್!

Shivalik sharma: ಕಳೆದ ವರ್ಷದ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪ್ಲೇಯರ್ ಆಗಿದ್ದ ಕ್ರಿಕೆಟಿಗ ಶಿವಾಲಿಕ್ ಶರ್ಮ (Shivalik sharma) ವಿರುದ್ಧ ರೇಪ್ ಕೇಸ್ ದಾಖಲಾಗಿದೆ. ರಾಜಸ್ಥಾನದ ಜೋಧ್ರುರದ ಕುಡಿ ಭಗತ್ಸುನಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಇದೀಗ ಈತನ ಬಂಧನವಾಗಿದೆ.
ದೂರುದಾರೆಯಾಗಿರುವ ಯುವತಿ ಕುಡಿ ಭಗತ್ಸುನಿಯ ಸೆಕ್ಟರ್ 2 ನಿವಾಸಿಯಾಗಿದ್ದು, ಅವರು ಶಿವಾಲಿಕ್ ಶರ್ಮಾ ವಿರುದ್ಧ ದಾಖಲಿಸಿದ್ದಾರೆ. ಪೊಲೀಸ್ ಎಫ್‌ಐಆರ್ ಪ್ರಕಾರ, ಕ್ರಿಕೆಟಿಗ ವಿವಾಹದ ಭರವಸೆ ನೀಡುವ ಮೂಲಕ ನಿಶ್ಚಿತಾರ್ಥ ಮಾಡಿಕೊಂಡು ದೈಹಿಕ ಸಂಬಂಧ ಬೆಳೆಸಿದ್ದಾನೆ ಎಂದು ಸಂತ್ರಸ್ತ ಯುವತಿ ಆರೋಪಿಸಿದ್ದಾರೆ.
ಯುವತಿಯ ಪ್ರಕಾರ, ನಿಶ್ಚಿತಾರ್ಥದ ನಂತರ, ಶಿವಾಲಿಕ್ ಜೋದ್ಭುರಕ್ಕೆ ಹಿಂತಿರುಗಿದಾಗ, ಅವರು ದೈಹಿಕ ಸಂಬಂಧ ಹೊಂದಿದ್ದರು. ಇಬ್ಬರೂ ಜೈಪುರ ಸೇರಿದಂತೆ ರಾಜಸ್ಥಾನದ ಹಲವು ಸ್ಥಳಗಳಿಗೆ ಹೋಗಿದ್ದರು. ಆದರೆ ಶಿವಾಲಿಕ್ ಅವರ ಪೋಷಕರು “ಅವರು ಕ್ರಿಕೆಟಿಗ, ಅವರಿಗೆ ಬೇರೆ ಸ್ಥಳಗಳಿಂದ ಪ್ರಸ್ತಾಪಗಳು ಬರುತಿದ್ದು ನಿಶ್ಚಿತಾರ್ಥ ಮುಂದುವರಿ ಸಾಧ್ಯವಿಲ್ಲ” ಎಂದಿದ್ದರಂತೆ.
Comments are closed.