Suhas Shetty Murder Case: ಸುಹಾಸ್ ಶೆಟ್ಟಿ ಹತ್ಯೆಯಲ್ಲಿ ಮುಸ್ಲಿಂ ಮಹಿಳೆಯರೂ ಭಾಗಿ?! ಹಂತಕರನ್ನು ಕಾರಿನಲ್ಲಿ ಎಸ್ಕೇಪ್ ಮಾಡಲು ಮುಂದೆ ನಿಂತ ಮಹಿಳೆಯರು!?

Share the Article

Suhas Shetty Murder Case: ಬಜ್ಪೆ: ಹಿಂದೂ ಕಾರ್ಯಕರ್ತ ಬಜ್ಪೆಯ ಸುಹಾಸ್ ಶೆಟ್ಟಿಯ ನ್ನು ಹಂತಕರು ತಲವಾರು ಹಾಗೂ ಇನ್ನಿತರ ಮಾರಕಾಯುಧಗಳಿಂದ ಕೊಚ್ಚಿ ಕೊಲೆಗೈದ ತಕ್ಷಣ ಹಂತಕರನ್ನು ಸಾಗಿಸಲು ಅಲ್ಲೇ ನಿಂತಿದ್ದ ಸ್ವಿಫ್ಟ್ ಕಾರಿನಲ್ಲಿ ಕೂರಿಸಿ ಘಟನಾ ಸ್ಥಳದಿಂದ ವ್ಯವಸ್ಥಿತವಾಗಿ ಕಳುಹಿಸಿ ಕೊಡಲಾಗಿದೆ. ಹೀಗಾಗಿ ಇದೊಂದು ಪೂರ್ವನಿಯೋಜಿತ ಕ್ಕೆತ್ಯದಂತೆ ಕಂಡು ಬರುತ್ತಿದೆ ಎಂದು ಸಾರ್ವಜನಿಕವಾಗಿ.ಮಾತುಗಳು ಕೇಳಿ ಬರುತ್ತಿವೆ. ಅಲ್ಲದೆ ಈ ಸಂಬಂಧ ಒಂದು ವಿಡಿಯೋ ವೈರಲ್ ಆಗಿದೆ.

ಆದರೆ ಇಡೀ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದ ಈ ಕೊಲೆಯಲ್ಲಿ ಇಬ್ಬರು ಮುಸ್ಲಿಂ ಮಹಿಳೆಯರೂ ಸಹಾ ನೇರವಾಗಿ ಭಾಗಿಯಾಗಿರುವ ಶಂಕೆ ಇದೀಗ ತನಿಖಾ ನಿರತ ಪೊಲೀಸರಿಗೆ ಸಿಸಿ ದೃಶ್ಯಾವಳಿ ಮೂಲಕ ಸಿಕ್ಕಿರುವುದು ಇನ್ನಷ್ಟೂ ಕುತೂಹಲ ಮೂಡಿಸಿದೆ ಎನ್ನಲಾಗುತ್ತಿದೆ.

ಹಂತಕರು ಕೊಲೆ ನಡೆಸಿದ ತಕ್ಷಣ ಅಲ್ಲೇ ಬಾಗಿಲು ತೆರೆದು ಕೊಂಡಿದ್ದ ಸ್ವಿಫ್ಟ್ ಕಾರೊಂದರಲ್ಲಿ ಹಂತಕರು ಕುಳಿತು ಕೊಳ್ಳುತ್ತಿದ್ದಂತೆ ಇಬ್ಬರು ಮುಸ್ಲಿಂ ಮಹಿಳೆಯರು ಹಂತಕರ ಕಾರಿನ ಬಳಿಬಂದು ಹಂತಕರಿಗೆ ಏನೋ ಸೂಚನೆ ಕೊಡುವ ದೃಶ್ಯ ಮತ್ತು ಹಂತಕರಿಗಾಗಿ ಕಾಯುತ್ತಿದ್ದ ಸ್ವಿಫ್ಟ್ ಕಾರಿನ ಪಕ್ಕದಲ್ಲೇ ರಸ್ತೆಯ ಇನ್ನೊಂದು ಭಾಗದಲ್ಲಿ ನಿಂತಿದ್ದ ಕಪ್ಪು ಬಣ್ಣದ ಕಾರು ಅದೇರೀತಿ ಹಂತಕರನ್ನು ಸ್ವಿಫ್ಟ್ ಕಾರಿನಲ್ಲಿ ಕೂರಿಸಲು ಸಹಕರಿಸಿದ ಕಪ್ಪು ಬಣ್ಣದ ಬಟ್ಟೆ ಧರಿಸಿರುವ ವ್ಯಕ್ತಿ ಇವೆಲ್ಲವುಗಳು ಸಿಸಿ ಕ್ಯಾಮರಾಗಳಲ್ಲಿ ಸೆರೆಯಾಗಿದ್ದು ಇದರ ಆಧಾರದಲ್ಲಿ ತನಿಖಾ ನಿರತ ಪೊಲೀಸರಿಗೆ ಇದೀಗ ಹಂತಕರು ಹಾಗೂ ಇವರಿಗೆ ಸಹಕರಿಸಿದವರೆಲ್ಲರ ಕುರಿತು ಮಹತ್ವದ ಮಾಹಿತಿಗಳು ಲಭ್ಯವಾಗಿದೆ ಎನ್ನಲಾಗಿದೆ.

Comments are closed.