Kashmir: ಝಿಪ್ ಲೈನ್ ನಲ್ಲಿದ್ದ ಪ್ರವಾಸಿಗನ ಕ್ಯಾಮರಾದಲ್ಲಿ ಉಗ್ರರ ದಾಳಿಯ ಭೀಕರ ದೃಶ್ಯ ಸೆರೆ!

Share the Article

Kashmir: ಕಾಶ್ಮೀರದ ಪಹಲ್ಗಾಮ್ ಉಗ್ರ ದಾಳಿ ಸಂಬಂಧಿಸಿದಂತೆ ಮತ್ತೊಂದು ಭಯಾನಕ ವಿಡಿಯೋ ಬಿಡುಗಡೆಯಾಗಿದೆ. ಪ್ರವಾಸಿಗರೊಬ್ಬರ ಕ್ಯಾಮರಾದಲ್ಲಿ ಉಗ್ರರ ಪೈಶಾಚಿಕ ಕೃತ್ಯ ಸೆರೆಯಾಗಿದೆ.

ಭಯೋತ್ಪಾದಕರ ದಾಳಿಯ ವಿಡಿಯೋ ಝಿಪ್ ಲೈನ್ ನಲ್ಲಿದ್ದ ಪ್ರವಾಸಿಗರೊಬ್ಬರ ಕ್ಯಾಮರಾದಲ್ಲಿ ಅವರಿಗೇ ಅರಿವಿಲ್ಲದೇ ರೆಕಾರ್ಡ್ ಆಗಿದೆ.

ಮೇಲೆ ಜಿಪ್ ಲೈನ್ ಕ್ರಾಸಿಂಗ್ ವೇಳೆ ವ್ಯಕ್ತಿ ಕ್ಯಾಮೆರಾ ಆನ್ ಮಾಡಿ ಹೋಗುತ್ತಿದ್ದಾಗ ಕೆಳಗೆ ಉಗ್ರರು ದಾಳಿ ಆರಂಭಿಸಿದ್ದಾರೆ. ಈ ವೇಳೆ ಕೆಳಗೆ ಗುಂಡಿನ ಶಬ್ಧದ ವೇಳೆ ಓರ್ವ ಪ್ರವಾಸಿಗ ಓಡುತ್ತಿರುತ್ತಾನೆ. ಈ ವೇಳೆ ಆತನನ್ನು ಬೆನ್ನಟ್ಟಿದ ಉಗ್ರ ಆತನ ತಲೆಗೆ ಗುಂಡು ಹಾರಿಸುತ್ತಾನೆ. ಕೂಡಲೇ ಆ ಪ್ರವಾಸಿಗ ಕುಸಿಯುತ್ತಾನೆ. ಆದರೆ ಇದಾವುದರ ಪರಿವೇ ಇಲ್ಲದೇ ಮೇಲೆ ಈ ವ್ಯಕ್ತಿ ರೋಪ್ ಕ್ರಾಸಿಂಗ್ ಮಾಡುತ್ತಾ ಕ್ಯಾಮೆರಾದಲ್ಲಿ ವಿಡಿಯೋ ರೆಕಾರ್ಡ್ ಮಾಡಿರುವುದು ಕಂಡುಬಂದಿದೆ. ರೋಪ್ ಕ್ರಾಸಿಂಗ್ ನ ಮುಕ್ತಾಯದ ಸಂದರ್ಭದಲ್ಲಿ ಏನೋ ಆಗುತ್ತಿದೆ ಎಂದು ಭಾವಿಸಿದ ಪ್ರವಾಸಿಗ ಆಗ ಕ್ಯಾಮೆರಾ ಆಫ್ ಮಾಡಿರುವುದು ವಿಡಿಯೋದಲ್ಲಿ ದಾಖಲಾಗಿದೆ.

Comments are closed.