Mangaluru: ಮಂಗಳೂರು: ಡ್ರಗ್ಸ್ ಪೆಡ್ಲೆರ್ ಮಹೇಶ್ ಶೆಟ್ಟಿ ಯಾನೆ ಚುನ್ನಿ ಬಜಿಲಕೇರಿ ಬಂಧನ!

Mangaluru: ಮಂಗಳೂರು (Mangaluru) ವಿಭಾಗದ ಅಬಕಾರಿ ಜಂಟಿ ಆಯುಕ್ತರ ಆದೇಶದಂತೆ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಅಬಕಾರಿ ಉಪ ಆಯುಕ್ತರ ನಿರ್ದೇಶನದಂತೆ, ಅಬಕಾರಿ ಉಪ ಅಧೀಕ್ಷಕರ ನೇತೃತ್ವದಲ್ಲಿ ಏಪ್ರಿಲ್ 24 ರಂದು ಮುಂಜಾನೆ 12.40 ಕ್ಕೆ ಮಂಗಳೂರಿನ ಸ್ಟೇಟ್ ಬ್ಯಾಂಕ್ ನಿಂದ ಹೊಯಿಗೆ ಬಜಾರ್ ರಸ್ತೆಯಲ್ಲಿರುವ ಗೂಡುಷೆಡ್ಡೆ ಹೋಗುವ ನಿರೇಶ್ವಲ್ಯ ರಸ್ತೆ ಬದಿಯಲ್ಲಿ, ಬಜಿಲಕೇರಿ ನಿವಾಸಿ ಮಹೇಶ್ ಶೆಟ್ಟಿ ಅಲಿಯಾಸ್ ಚುನ್ನಿ ಎಂಬಾತ ತನ್ನ ಹೊಂದ ಆಕ್ಟಿವಾದಲ್ಲಿ ಗಾಂಜಾ ಮತ್ತು ಡ್ರಗ್ಸ್ ಮಾರಾಟ ಮಾಡುವುದನ್ನು ಪತ್ತೆ ಹಚ್ಚಿ ಆತನನ್ನು ಬಂಧಿಸಿದ್ದಾರೆ.