Eshwar khandre: ಕಾಡು ಹಂದಿಯನ್ನು ಸಾಯಿಸಲು ಕಚ್ಚಾ ಬಾಂಬ್‌ ಇಟ್ಟರೆ ಕ್ರಮ!

Share the Article

Eshwar khandre: ಚಾಮರಾಜನಗರ ಜಿಲ್ಲೆಯ ವಿವಿಧೆಡೆ ಕಾಡುಹಂದಿಯನ್ನು ಸಾಯಿಸಲು ಕಡಿಮೆ ತೀವ್ರತೆಯ ಕಚ್ಚಾ ಬಾಂಬ್‌ ತಯಾರಿಸಿ ಇಡಲಾಗುತ್ತಿದ್ದು, ಇದನ್ನು ತಿಂದು ಜಾನುವಾರುಗಳು ಹಾಗೂ ವನ್ಯಜೀವಿಗಳು ಸಾವಿಗೀಡಾಗುತ್ತಿವೆ. ಕೂಡಲೇ ಈ ಬಗ್ಗೆ ನಿಗಾ ಇಟ್ಟು ಕಚ್ಚಾ ಬಾಂಬ್‌ ಇಡುವವರ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿ ಪ್ರಕರಣ ದಾಖಲಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಅರಣ್ಯ ಸಚಿವರಾದ ಈಶ್ವರ್ ಖಂಡ್ರೆ (Eshwar khandre) ಅವರು ತಿಳಿಸಿದ್ದಾರೆ.

Comments are closed.