Accident: ನೇಪಾಳದಲ್ಲಿ ಭೀಕರ ಬಸ್ ಅಪಘಾತ: 25 ಭಾರತೀಯ ಪ್ರವಾಸಿಗರಿಗೆ ಗಂಭೀರ ಗಾಯ!

Share the Article

Accident: ಭಾರತೀಯ ಪ್ರವಾಸಿಗರನ್ನು ಹೊತ್ತು ಸಾಗುತ್ತಿದ್ದ ಬಸ್ ಅಪಘಾತಕ್ಕೀಡಾಗಿ (Accident) 25 ಭಾರತೀಯ ಪ್ರಜೆಗಳು ಗಾಯಗೊಂಡಿರುವ ಘಟನೆ ನೇಪಾಳದಲ್ಲಿ ನಡೆದಿದೆ.

ನೇಪಾಳದ ಪೋಖರಾಗೆ ತೆರಳುತ್ತಿದ್ದ ಬಸ್‌ ಡಾಂಗ್ ಜಿಲ್ಲೆಯಲ್ಲಿ ಅಪಘಾತಕ್ಕೀಡಾಗಿದೆ. ಶುಕ್ರವಾರ ಅಪಘಾತ ಸಂಭವಿಸಿದ್ದು, ಬ್ರೇಕ್ ವೈಫಲ್ಯದಿಂದ ಸಂಭವಿಸಿದೆ ಎಂದು ಶಂಕಿಸಲಾಗಿದೆ. ಗಾಯಾಳುಗಳಲ್ಲಿ ಹೆಚ್ಚಿನವರು ಉತ್ತರ ಪ್ರದೇಶದ ಲಖನೌ, ಸೀತಾಪುರ, ಹರ್ದೋಯಿ ಹಾಗೂ ಬಾರಾಬಂಕಿ ಜಿಲ್ಲೆಯವರು ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

ಗಾಯಾಳುಗಳನ್ನು ನೇಪಾಳದೊಂದಿಗೆ ಗಡಿ ಹಂಚಿಕೊಂಡಿರುವ ಉತ್ತರ ಪ್ರದೇಶದ ಡಾಂಗ್‌ನ ತುಳಸಿಪುರದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. 19 ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಈ ಪೈಕಿ ಮೂವರ ಸ್ಥಿತಿ ಗಂಭೀರವಾಗಿದೆ ಎಂದು ತುಳಸಿಪುರದ ವೃತ್ತ ಅಧಿಕಾರಿ ಬ್ರಿಜನಂದನ್ ರೈ ತಿಳಿಸಿದ್ದಾರೆ.

Comments are closed.