CET : CET ಸೀಟು ಹಂಚಿಕೆಗೆ ಹೊಸ ವಿಧಾನ ಘೋಷಿಸಿದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ

CET: ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ವಿದ್ಯಾರ್ಥಿಸ್ನೇಹಿ ವಿಧಾನ ರೂಪಿಸಿದೆ.
ಸಿಇಟಿ ವಿಚಾರವಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ವಿದ್ಯಾರ್ಥಿಗಳಿಗೆ ಹಲವು ಸಹಿ ಸುದ್ದಿಗಳನ್ನು ನೀಡುತ್ತಿದೆ. ಪಿಯುಸಿ ಫೇಲಾದರೂ ಕೂಡ ಇಂಜಿನಿಯರಿಂಗ್ ಸೇರಿದಂತೆ ಬಿಬಿದ ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ಪ್ರಾಧಿಕಾರವು ಅನುಮತಿ ನೀಡಿತ್ತು. ಈ ಬೆನ್ನಲ್ಲೇ ಪ್ರಾಧಿಕಾರವು ವಿದ್ಯಾರ್ಥಿಗಳಿಗೆ ಮತ್ತೊಂದು ಸಹಿ ಸುದ್ದಿ ನೀಡಿದೆ.
ಹೌದು, ಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವಿದ್ಯಾರ್ಥಿ ಸ್ನೇಹಿ ವಿಧಾನವನ್ನು ರೂಪಿಸಿದ್ದು, ಕಾಲೇಜು ಆಯ್ಕೆ ಮಾಡಿಕೊಂಡರೂ ಪ್ರವೇಶ ಪಡೆದುಕೊಳ್ಳದ ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ಸಿಇಟಿ ಸೀಟು ಹಂಚಿಕೆ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗುವುದು ಎಂದು ಘೋಷಣೆ ಮಾಡಿದೆ.
2025- 26 ನೇ ಸಾಲಿನಿಂದ ಈ ಹೊಸ ವ್ಯವಸ್ಥೆ ಜಾರಿಯಾಗಲಿದ್ದು, ಈ ಪ್ರಕ್ರಿಯೆಯಿಂದ ಹೊರಗೆ ಹೋದವರು 750 ರೂಪಾಯಿ ದಂಡ ಶುಲ್ಕ ಪಾವತಿಸಿ ಮತ್ತೆ ಸೀಟು ಹಂಚಿಕೆಯ ಉಳಿದ ಸುತ್ತುಗಳಿಗೆ ಮರು ಪ್ರವೇಶ ಪಡೆದುಕೊಳ್ಳಬಹುದಾಗಿದೆ ಎಂದು ಹೇಳಲಾಗಿದೆ.
ಏನಿದು ಹೊಸ ವಿಧಾನ?
ಇಂಜಿನಿಯರಿಂಗ್, ಪಶು ವೈದ್ಯಕೀಯ, ಯೋಗ, ನ್ಯಾಚುರೋಪತಿ, ಬಿ ಫಾರ್ಮಾ, ಫಾರ್ಮಾ ಡಿ., ಆರ್ಕಿಟೆಕ್ಚರ್, ಬಿಎಸ್ಸಿ ಕೃಷಿ ಸೇರಿ ವಿವಿಧ ಕೋರ್ಸ್ ಗಳಿಗೆ ಸಿಇಟಿ ಬರೆದ ವಿದ್ಯಾರ್ಥಿಗಳು ತಾವು ಪಡೆದುಕೊಂಡ ರ್ಯಾಂಕಿಂಗ್ಗೆ ಅನುಗುಣವಾಗಿ ಆಯ್ಕೆ ಮಾಡಿಕೊಂಡ ಕಾಲೇಜುಗಳು ದೊರೆತ ನಂತರ ಚಾಯ್ಸ್ ಒಂದು ನಮೂದಿಸಿ ಪ್ರಾಧಿಕಾರದ ಖಾತೆಗೆ ಶುಲ್ಕ ಪಾವತಿಸುತ್ತಿದ್ದರು. ಅಂತವರು ಆ ಕಾಲೇಜುಗಳಿಗೆ ಕಡ್ಡಾಯವಾಗಿ ಪ್ರವೇಶ ಪಡೆದುಕೊಳ್ಳಬೇಕಿತ್ತು.
ಒಂದು ವೇಳೆ ಅವರು ಪ್ರವೇಶ ಪಡೆದುಕೊಳ್ಳದಿದ್ದರೆ ಸೀಟು ಹಂಚಿಕೆ ಪ್ರಕ್ರಿಯೆಯಿಂದ ಹೊರಗೆ ಹೋಗುತ್ತಿದ್ದರು. ಶುಲ್ಕ ಕೂಡ ಸಿಗುತ್ತಿರಲಿಲ್ಲ.
ಚಾಯ್ಸ್ ಒಂದು ನಮೂದಿಸಿ ಸೀಟು ಸಿಗದೇ ಇದ್ದವರು ಚಾಯ್ಸ್ 2, ಚಾಯ್ಸ್ 3 ನಮೂದಿಸಿ ಮುಂದಿನ ಸುತ್ತಿನಲ್ಲಿ ಭಾಗವಹಿಸುತ್ತಾರೆ. ಮೂರು ಚಾಯ್ಸ್ ಗಳ ಮೂಲಕ ಸೀಟು ಪಡೆಯುತ್ತಿದ್ದವರು ಶುಲ್ಕ ಪಾವತಿಸಿ ಪ್ರವೇಶ ಪತ್ರ ಡೌನ್ಲೋಡ್ ಮಾಡಿಕೊಂಡರು ಕಾಲೇಜುಗಳಿಗೆ ದಾಖಲಾದ ಕುರಿತಾಗಿ ಪ್ರಾಧಿಕಾರಕ್ಕೆ ಖಚಿತ ಮಾಹಿತಿ ದೊರೆಯುತ್ತಿರಲಿಲ್ಲ. ಇದು ಸೀಟ್ ಬ್ಲಾಕಿಂಗ್ ದಂಧೆಗೆ ದಾರಿ ಮಾಡಿಕೊಡುತ್ತಿತ್ತು.
ಅಲ್ಲದೆ ಸೀಟು ಹಂಚಿಕೆ ಪ್ರಕ್ರಿಯೆಯಲ್ಲಿ ಕಾಲೇಜುಗಳನ್ನು ಆದ್ಯತೆಯ ಮೇಲೆ ನಮೂದಿಸಿದ್ದ ವಿದ್ಯಾರ್ಥಿಗಳಿಗೆ ತಾವು ಬಯಸಿದ ಕಾಲೇಜುಗಳು ಸಿಗದೇ ಇದ್ದಾಗ ಚಾಯ್ಸ್ 4 ನಮೂದಿಸಿ ಆಯ್ಕೆ ಪ್ರಕ್ರಿಯೆಯಿಂದ ಹೊರಗೆ ಹೋಗುತ್ತಾರೆ. ಕೆಲವೊಮ್ಮೆ ಕಣ್ತಪ್ಪಿನಿಂದ ಚಾಯ್ಸ್ 4 ನಮೂದಿಸಿದರೂ ಮುಂದಿನ ಸುತ್ತುಗಳಲ್ಲಿ ಅವರಿಗೆ ಅವಕಾಶ ಸಿಗುತ್ತಿರಲಿಲ್ಲ. ಪ್ರತಿ ವರ್ಷವೂ ಇಂತಹ ಸಾವಿರಾರು ವಿದ್ಯಾರ್ಥಿಗಳು ಕೆಇಎ ಕಚೇರಿಗೆ ಅಲೆಯುತ್ತಿದ್ದರು. ಈಗ ಪರಿಚಯಿಸಿರುವ ಹೊಸ ವಿಧಾನದಲ್ಲಿ ಚಾಯ್ಸ್ 4 ನಮೂದಿಸಿದವರೂ ₹750 ದಂಡ ಪಾವತಿಸಿ ಮತ್ತೆ ಸೀಟು ಆಯ್ಕೆ ಮಾಡಿಕೊಳ್ಳಬಹುದು.
Comments are closed.