Bullets Fried: ತುಕ್ಕು ಹಿಡಿದ ಗುಂಡುಗಳನ್ನು ಪ್ಯಾನ್‌ನಲ್ಲಿ ಫ್ರೈ ಮಾಡಿದ ಪೊಲೀಸ್: ಅಡುಗೆ ಮನೆಯಲ್ಲಿ ಗುಂಡುಗಳು ಸ್ಪೋಟ!

Bullets Fried: ಮಾರ್ಚ್ 11ರಂದು ಕೇರಳದ(Kerala) ಕೊಚ್ಚಿಯಲ್ಲಿರುವ ಪೊಲೀಸ್ ಶಿಬಿರದ ಅಡುಗೆ ಮನೆಯಲ್ಲಿದ್ದ(Police Station Kitchen) ಪ್ಯಾನ್‌ನಲ್ಲಿ ಗುಂಡುಗಳು ಸ್ಫೋಟಗೊಂಡ ನಂತರ ಉನ್ನತ ಮಟ್ಟದ ತನಿಖೆ ಪ್ರಾರಂಭವಾಗಿದೆ ಎಂದು ವರದಿಯೊಂದು ತಿಳಿಸಿದೆ. ಅಧಿಕಾರಿ ಸಿವಿ ಸಜೀವನ್ ಗನ್ ಸೆಲ್ಯೂಟ್‌ಗೆ ತಯಾರಿ ನಡೆಸುವಾಗ ತುಕ್ಕು ಹಿಡಿದ ಗುಂಡುಗಳನ್ನು ನೋಡಿದ್ದಾರೆ. ನಂತರ ಅವುಗಳನ್ನು ಸ್ವಚ್ಛಗೊಳಿಸಲು ಪ್ರಯತ್ನಿಸುವಾಗ ಪ್ರಮಾಣಿತ ವಿಧಾನವನ್ನು ಅನುಸರಿಸುವ ಬದಲು, ಪ್ಯಾನ್ ಅನ್ನು ಬಿಸಿ ಮಾಡಿ ಅದರ ಮೇಲೆ ಇಟ್ಟಿದ್ದಾರೆ. ಇದರಿಂದಾಗಿ ಸ್ಫೋಟ ಸಂಭವಿಸಿದೆ.

ಕೇರಳದಲ್ಲಿ, ರಾಜ್ಯ ಆಯೋಜಿಸಿದ ಅಂತ್ಯಕ್ರಿಯೆಗಳ ಸಮಯದಲ್ಲಿ ಪೊಲೀಸ್ ತಂಡವು ಔಪಚಾರಿಕ ಗನ್ ಸೆಲ್ಯೂಟ್ ನೀಡುವುದು ವಾಡಿಕೆ. ಮಾರ್ಚ್ 11 ರಂದು ಕೊಚ್ಚಿಯಲ್ಲಿರುವ ಕೇರಳ ಪೊಲೀಸ್ ಶಿಬಿರಕ್ಕೆ ಅಂತಹ ಕಾರ್ಯಕ್ರಮಕ್ಕಾಗಿ ಕರೆ ಬಂದಾಗ, ಮದ್ದುಗುಂಡುಗಳ ಉಸ್ತುವಾರಿ ಅಧಿಕಾರಿ ಸಿವಿ ಸಜೀವನ್ ಅವರು ವಿದಾಯ ಸಮಾರಂಭಕ್ಕೆ ಅಗತ್ಯವಾದ ಸಾಮಗ್ರಿಗಳನ್ನು ಸಿದ್ಧಪಡಿಸಲು ಪ್ರಾರಂಭಿಸಿದರು ಎಂದು IANS ವರದಿ ಮಾಡಿದೆ.

ಸಜೀವನ್ ತಮ್ಮ ತಪಾಸಣೆಯ ಸಮಯದಲ್ಲಿ, ಗನ್ ಸೆಲ್ಯೂಟ್ ಮಾಡಲು ಉದ್ದೇಶಿಸಲಾದ ಕೆಲವು ಗುಂಡುಗಳು ತುಕ್ಕು ಹಿಡಿದಿರುವುದನ್ನು ಗಮನಿಸಿ ಅದನ್ನು ಸಮಾರಂಭದ ಮೊದಲು ಇರೋ ಸಮಯದಲ್ಲಿ ಬೇಗ ಸ್ವಚ್ಛಗೊಳಿಸಲು ಅವರು ನಿರ್ಧರಿಸಿದರು. ಈ ವೇಳೆ ಈ ಸ್ಫೋಟ ಸಂಭವಿಸಿದೆ.

DAILY PRIZE DRAW
23:59:59
Daily Prize
Enter Now and Earn $50
View this ad to enter today's drawing
1,453 entries today

ಸ್ಫೋಟದ ತೀವ್ರತೆಗೆ ಆವರಣದಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು. ಅದೃಷ್ಟವಶಾತ್, ಬೆಂಕಿಯನ್ನು ಬೇಗ ನಂದಿಸಲಾಯಿತು. ಹಾಗಾಗಿ ಯಾವುದೆ ಹಾನಿ ಸಂಭವಿಸಿಲ್ಲ. ಘಟನೆಯ ಬಗ್ಗೆ ತನಿಖೆ ಈಗಾಗಲೇ ಆರಂಭವಾಗಿದ್ದು, ಮುಂದಿನ ಕ್ರಮ ಕೈಗೊಳ್ಳುವ ಮೊದಲು ಹಿರಿಯ ಅಧಿಕಾರಿಗಳು ವಿವರವಾದ ವರದಿಗಾಗಿ ಕಾಯುತ್ತಿದ್ದಾರೆ ಎಂದು ಉನ್ನತ ಪೊಲೀಸ್ ಅಧಿಕಾರಿಯೊಬ್ಬರು IANS ಗೆ ದೃಢಪಡಿಸಿದ್ದಾರೆ. ಅಪಘಾತಕ್ಕೆ ಕಾರಣವಾದ ಯಾವುದೇ ಕಾರ್ಯವಿಧಾನದ ಲೋಪಗಳಿವೆಯೇ ಮತ್ತು ಮದ್ದುಗುಂಡುಗಳನ್ನು ನಿರ್ವಹಿಸುವಲ್ಲಿ ಸರಿಯಾದ ಸುರಕ್ಷತಾ ಕ್ರಮಗಳನ್ನು ನಿರ್ಲಕ್ಷಿಸಲಾಗಿದೆಯೇ ಎಂದು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಯಾವುದೇ ಗಾಯಗಳು ವರದಿಯಾಗಿಲ್ಲದಿದ್ದರೂ, ಈ ಘಟನೆಯು ಕೇರಳ ಪೊಲೀಸ್ ಪಡೆಯೊಳಗಿನ ಸುರಕ್ಷತಾ ಅಭ್ಯಾಸಗಳ ಬಗ್ಗೆ ವ್ಯಾಪಕ ಚರ್ಚೆಯನ್ನು ಹುಟ್ಟುಹಾಕಿದೆ.

Comments are closed.