UP: 50ರ ಪ್ರಾಯದ ಲೆಕ್ಚರ್ ನಿಂದ ವಿದ್ಯಾರ್ಥಿನಿಯರಿಗೆ ಲೈಂಗಿಕ ದೌರ್ಜನ್ಯ – ಸುಮಾರು 59ಕ್ಕೂ ಹೆಚ್ಚು ವಿಡಿಯೋಗಳು ಪತ್ತೆ!!

UP: ಮಕ್ಕಳಿಗೆ ಬುದ್ಧಿ ಹೇಳುವ, ವಿದ್ಯೆಯನ್ನು ನೀಡುವ ವಿದ್ಯಾ ಗುರು ಒಬ್ಬ ತನ್ನದೇ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪದ ಮೇಲೆ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಆತನ ಕಾಮ ಕ್ರೀಡೆಯನ್ನು ಕೇಳಿದರೆ ನೀವೇ ಶಾಕ್ ಆಗುತ್ತೀರಿ.

 

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ರಜನೀಶ್​ ಕುಮಾರ್​ (50) ಎಂಬಾತ ಡಿಗ್ರಿ ಕಾಲೇಜಿನಲ್ಲಿ ಭೂಗೋಳಶಾಸ್ತ್ರದ ಪ್ರಾಧ್ಯಾಪಕನಾಗಿ ಕೆಲಸ ಮಾಡುತ್ತಿದ್ದ. ಇದೀಗ ಆತನ ನಿಜ ಬಣ್ಣ ಬಯಲಾಗಿದ್ದು, ಪೊಲೀಸರು ಬಂಧಿಸಿದ್ದಾರೆ. ಅಚ್ಚರಿಯೇನೆಂದರೆ ಆತ ಇದುವರೆಗೂ ಎಷ್ಟು ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೋ ಗೊತ್ತಿಲ್ಲ. ಆದರೆ ಇದೀಗ ಅವನ ಬಳಿ ಬರೋಬ್ಬರಿ 59 ವಿಡಿಯೋಗಳು ಇರುವುದು ಪತ್ತೆಯಾಗಿದೆ.

DAILY PRIZE DRAW
23:59:59
Daily Prize
Enter Now and Earn $50
View this ad to enter today's drawing
1,453 entries today

 

ಕೆಲವು ದಿನಗಳ ಹಿಂದೆ ಬಂದ ಅನಾಮಧೇಯ ಪತ್ರದ ಮೂಲಕ ರಜನೀಶ್​ ಕಿರುಕುಳದ ಬಗ್ಗೆ ಹೊರಜಗತ್ತಿಗೆ ತಿಳಿದಿದೆ. ಇನ್ನೂ ಆತನ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಸುಮಾರು 72 ಗಂಟೆಗಳ ಕಾಲ ಆತ ತಲೆಮರೆಸಿಕೊಂಡಿದ್ದ. ಅಲ್ಲದೆ, ನಿರೀಕ್ಷಣಾ ಜಾಮೀನು ಪಡೆಯಲು ತೆರೆಮರೆಯಲ್ಲಿ ಪ್ರಯತ್ನಿಸುತ್ತಿರುವಾಗಲೇ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಇಷ್ಟೇ ಅಲ್ಲದೆ ತಾನು ಎಷ್ಟು ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ ಮಾಡಿದ್ದೇನೆಂಬುದು ನನಗೆ ನೆನಪಿಲ್ಲ ಎಂದು ಆರೋಪಿ ರಜನೀಶ್​ ನೀಡಿರುವ ಹೇಳಿಕೆ ಪೊಲೀಸರನ್ನೇ ದಂಗಬಡಿಸಿದೆ.

 

ಪೊಲೀಸರ ಶೋಧ ಕಾರ್ಯಾಚರಣೆ ಸಮಯದಲ್ಲಿ ವಿದ್ಯಾರ್ಥಿನಿಯರೊಂದಿಗೆ ಸಲುಗೆಯಿಂದ ಇರುವ 59 ವಿಡಿಯೋಗಳನ್ನು ಆತನ ಮನೆಯಲ್ಲಿ ವಶಪಡಿಸಿಕೊಳ್ಳಲಾಗಿದೆ. ಕೆಲವು ವರ್ಷಗಳ ಹಿಂದೆಯೇ ಲೈಂಗಿಕ ಕ್ರಿಯೆಯನ್ನು ರೆಕಾರ್ಡ್ ಮಾಡಲು ಪ್ರಾರಂಭಿಸಿದ್ದೆ. ಆದರೆ, ಅದಕ್ಕೂ ಮೊದಲು ಸಾಕಷ್ಟು ವಿದ್ಯಾರ್ಥಿನಿಯರನ್ನು ಬಳಸಿಕೊಂಡಿದ್ದೇನೆ ಎಂದು ಆರೋಪಿ ರಜನೀಶ್​ ಕುಮಾರ್​ ಪೊಲೀಸರಿಗೆ ತಿಳಿಸಿದ್ದಾನೆ.

 

ತನ್ನ ಈ ಹೇಯ ಕೃತ್ಯದ ಬಗ್ಗೆ ಮಾತನಾಡಿರುವ ರಜನೀಶ್ ‘ಒಮ್ಮೆ ನನ್ನ ಕೊಠಡಿಯಲ್ಲಿರುವ ಕಂಪ್ಯೂಟರ್‌ನ ವೆಬ್‌ಕ್ಯಾಮ್‌ನಲ್ಲಿ ವಿದ್ಯಾರ್ಥಿನಿಯೊಂದಿಗಿನ ಲೈಂಗಿಕ ಕ್ರಿಯೆ ರೆಕಾರ್ಡ್ ಆಗಿತ್ತು. ಅದನ್ನು ಉದ್ದೇಶಪೂರ್ವಕವಾಗಿ ಮಾಡಿರಲಿಲ್ಲ. ಕಂಪ್ಯೂಟರ್ ಅನ್ನು ಪರಿಶೀಲಿಸಿದಾಗ ಆ ದೃಶ್ಯಗಳನ್ನು ನೋಡಿ, ಆನಂತರ ಎಲ್ಲವನ್ನೂ ರೆಕಾರ್ಡ್ ಮಾಡಿ ಸಂಗ್ರಹಿಸಲು ನಿರ್ಧರಿಸಿದೆ. ಸ್ಪಷ್ಟವಾದ ವಿಡಿಯೋಗಳನ್ನು ರೆಕಾರ್ಡ್​ ಮಾಡಲು ಕಂಪ್ಯೂಟರ್‌ನಲ್ಲಿ ವಿಶೇಷ ಸಾಫ್ಟ್‌ವೇರ್ ಅನ್ನು ಸಹ ಇನ್​ಸ್ಟಾಲ್​ ಮಾಡಿದೆ. ಆ ದೃಶ್ಯಗಳನ್ನು ತೋರಿಸುವ ಮೂಲಕ ಹಲವಾರು ಜನರನ್ನು ಬ್ಲ್ಯಾಕ್‌ಮೇಲ್ ಸಹ ಮಾಡಿದ್ದೇನೆ’ ಎಂದು ಆರೋಪಿ ರಜನೀಶ್​ ಬಾಯ್ಬಿಟ್ಟಿದ್ದಾನೆ.

Comments are closed.