Mangalore: ಮಂಗಳೂರಿನಲ್ಲಿ ರಸ್ತೆ ವಿಸ್ತರಣೆ ನೆಪದಲ್ಲಿ ಕಾಂಪೌಂಡ್ ಗೋಡೆ ಧ್ವಂಸ: 17 ಮಂದಿ ವಿರುದ್ಧ

Mangalore: ರಸ್ತೆ ವಿಸ್ತರಣೆಯ ಹೆಸರಿನಲ್ಲಿ ಯಾವುದೇ ಸೂಕ್ತ ಆದೇಶವಿಲ್ಲದೆ ಮನೆಯ ಕಾಂಪೌಂಡ್ ಗೋಡೆಯನ್ನು ಧ್ವಂಸಗೊಳಿಸಿದ ಘಟನೆ ಮಂಗಳೂರಿನ (Mangalore) ಪಚ್ಚನಾಡಿ ವೈದ್ಯನಾಥ ನಗರದಲ್ಲಿ ನಡೆದಿದೆ. ಈ ಪ್ರಕರಣದಲ್ಲಿ ಗಣೇಶ್ ಎಂಬ ವ್ಯಕ್ತಿಯ ನೇತೃತ್ವದಲ್ಲಿ ಒಟ್ಟು 17 ಮಂದಿ ಗೂಂಡಾ ರೀತಿಯಲ್ಲಿ ವರ್ತಿಸಿ, ಸ್ಥಳೀಯರೊಂದಿಗೆ ದಾಂಧಲೆ ನಡೆಸಿದ ಆರೋಪ ಎದುರಾಗಿದೆ.

 

ರಸ್ತೆ ವಿಸ್ತರಣೆಗೆ ಸಂಬಂಧಿಸಿದಂತೆ ಮಂಗಳೂರು ಪಾಲಿಕೆಯಿಂದ ಯಾವುದೇ ವರ್ಕ್ ಆರ್ಡರ್ ಜಾರಿಯಾಗಿಲ್ಲ. ಅಲ್ಲದೇ ಈ ಘಟನೆಯಲ್ಲಿ ಗಣೇಶ್ ಕೆಲವು ಸ್ಥಳೀಯರು ಸಹ ಸಾಥ್ ನೀಡಿದ್ದು, ಒಟ್ಟು 17 ಜನರ ವಿರುದ್ಧ ಮಂಗಳೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

DAILY PRIZE DRAW
23:59:59
Daily Prize
Enter Now and Earn $50
View this ad to enter today's drawing
1,453 entries today

Comments are closed.