Patna: ಲಾಲು ಪುತ್ರನ ಧಮ್ಕಿಗೆ ಡ್ಯಾನ್ಸ್ ಮಾಡಿದ ಪೇದೆ ಸಸ್ಪೆಂಡ್ !

Patna: ಆರ್‌ಜೆಡಿ ನಾಯಕ, ಮಾಜಿ ಸಚಿವ ತೇಜ್ ಪ್ರತಾಪ್ ಯಾದವ್ ಸೂಚನೆ ಮೇರೆಗೆ ಹೋಳಿ ಸಂದರ್ಭದಲ್ಲಿ ನೃತ್ಯ ಮಾಡಿದ್ದ ಪೊಲೀಸ್ ಪೇದೆಯನ್ನು ಕರ್ತವ್ಯದಿಂದ ಅಮಾನತು ಮಾಡಲಾಗಿದೆ. ಶನಿವಾರ ಪಟನಾದಲ್ಲಿ ಆರ್‌ಜೆಡಿ ಪಕ್ಷದ ವತಿಯಿಂದ ಹೋಳಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು.
ಈ ಸಮಯದಲ್ಲಿ ಮೈಕ್ ಹಿಡಿದ ತೇಜ್ ಪ್ರತಾಪ್ ಯಾದವ್, ಪೊಲೀಸ್ ಸಿಬ್ಬಂದಿ ದೀಪಕ್ ಕುಮಾರ್ ಅವರಿಗೆ ಡ್ಯಾನ್ಸ್ ಮಾಡು, ಇಲ್ಲದಿದ್ದರೆ ಅಮಾನತು ಮಾಡುವುದಾಗಿ ಬೆದರಿಸಿದ್ದರು.
ನಂತರ ಪೇದೆ ನೃತ್ಯ ಮಾಡಿದ್ದಾರೆ. ಈ ವೀಡಿಯೋ ವೈರಲ್ ಆದ ಬೆನ್ನಲ್ಲೇ ವ್ಯಾಪಕ ಟೀಕೆಗೆ ಗುರಿಯಾಗಿತ್ತು.
Comments are closed.