America: ಆಗತಾನೆ ಹುಟ್ಟಿದ ಹೆಣ್ಣು ಮಗುವನ್ನು ಕಂಡು ವೈದ್ಯರೆಲ್ಲಾ ಶಾಕ್ – ಹೆದರಿ ಓಡಿದ ನರ್ಸ್ !! ಕಾರಣವೇನು?

America: ಜಗತ್ತಿನಲ್ಲಿ ನಡೆಯುವ ಕೌತುಕಗಳಿಗೆ ಕೊನೆಯಲ್ಲಿದೆ ಅಲ್ಲವೇ? ಪ್ರತಿನಿತ್ಯವೂ ಕೂಡ ಒಂದೊಂದು ವಿಸ್ಮಯಗಳನ್ನು ನಾವು ನೋಡುತ್ತೇವೆ. ಅಂತೆಯೇ ಇದೀಗ ಅಮೇರಿಕಾದಲ್ಲಿ ಆಗ ತಾನೆ ಜನಿಸಿದ ಹೆಣ್ಣು ಮಗುವೊಂದನ್ನು ಕಂಡು ವೈದ್ಯರೆಲ್ಲರೂ ಶಾಕ್ ಆಗಿದ್ದಾರೆ. ಅಷ್ಟೇ ಅಲ್ಲದೆ ಅಲ್ಲಿದ್ದ ನರ್ಸ್ ಗಳು ಹೆದರಿ ಹೊರ ನಡೆದಿದ್ದಾರೆ. ಹಾಗಿದ್ದರೆ ಅಷ್ಟಕ್ಕೂ ಅಲ್ಲಿ ನಡೆದಿದ್ದೇನು ಗೊತ್ತಾ?

ಅಮೆರಿಕದ(America)ಅಲಬಾಮಾದಲ್ಲಿ ಪಮೇಲಾ ಮಾನ್ ಎಂಬ ಮಹಿಳೆಯೊಬ್ಬರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಸದ್ಯ ಈ ಘಟನೆ ದೇಶಾದ್ಯಂತ ಚರ್ಚೆಯಾಗುತ್ತಿದೆ. ಈ ಹೆಣ್ಣು ಮಗುವನ್ನು ಹೆರಿಗೆ ಮಾಡಿದ ವೈದ್ಯರು ಒಮ್ಮೆ ಶಾಕ್ ಆಗಿದ್ದಾರೆ. ಮಾತ್ರವಲ್ಲ ಆಸ್ಪತ್ರೆಯ ಕಿರುಚಿಕೊಂಡು ಓಡಿ ಹೋಗಿದ್ದಾಳೆ. ಯಾಕೆ ಅಂತೀರಾ? ಆಗ ತಾನೆ ಹುಟ್ಟಿದ ಆ ಹೆಣ್ಣು ಮಗು ತೂಕ ಬರೋಬ್ಬರಿ 13 ಪೌಂಡ್ ಮತ್ತು 4 ಔನ್ಸ್ ತೂಕವಿತ್ತು. ಅಂದ್ರೆ 6 ಕೆಜಿ ಗಿಂತ ಸ್ವಲ್ಪ ಹೆಚ್ಚು.

ಸಾಮಾನ್ಯವಾಗಿ ಜನನದ ಸಮಯದಲ್ಲಿ ಆರೋಗ್ಯವಂತ ಮಗುವಿನ ಸರಾಸರಿ ತೂಕ 7 ಪೌಂಡ್ ಅಂದರೆ 3.17 ಕೆಜಿ ಇರುತ್ತದೆ. ಆದರೆ ಈ ಮಗುವಿನ ತೂಕ ಗಾತ್ರ ನೋಡಿ ಅಲ್ಲಿ ನೆರದಿದ್ದವರೆಲ್ಲರೂ ಕೂಡ ಬೆಚ್ಚಿಬಿದ್ದಿದ್ದಾರೆ.

ಈ ಕುರಿತು ಪಮೇಲಾ ಪ್ರತಿಕ್ರಿಯೆ ನೀಡಿದ್ದು, ‘ವೈದ್ಯರು ಅದನ್ನು ನನ್ನಿಂದ ಹೊರತೆಗೆದಾಗ, ಎಲ್ಲಾ ನರ್ಸ್‌ಗಳು ‘ಓ ದೇವರೇ’ ಎಂದು ಉದ್ಗರಿಸಿದ್ದಾರೆ’. ಏನಾಯಿತು ಎಂದು ನನಗೆ ಅರ್ಥವಾಗದ ಕಾರಣ, ಅವರ ಮಾತುಗಳನ್ನು ಕೇಳಿ ನಾನು ಕೂಡ ಆಘಾತಕ್ಕೊಳಗಾಗಿದ್ದೆ ಎಂದು ಪಮೇಲಾ ಹೇಳಿದ್ದಾರೆ.

Comments are closed.