Viral Video : ಫಸ್ಟ್ ನೈಟ್ ಬಳಿಕ ಇಲ್ಲಿ ಮದುಮಗಳಿಗೆ ನಡೆಯುತ್ತೆ, ‘ಕನ್ಯತ್ವ ಪರೀಕ್ಷೆ’!! ವಿಡಿಯೋ ವೈರಲ್

Viral Video :ಸತ್ಯ ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೋ ವೈರಲಾಗುತ್ತಿದೆ. ಈ ವಿಡಿಯೋದ ಅಸಲು ವಿಚಾರ ಕೇಳಿದರೆ ನೀವು ನಿಜಕ್ಕೂ ಛೀ…ತೂ ಇದೆಂಥ ಅಸಹ್ಯ? ಎಂದು ಬೈದುಕೊಳ್ಳುತ್ತೀರಿ. ಯಾಕೆಂದರೆ ಈ ವಿಡಿಯೋದಲ್ಲಿ ನಡೆಯುತ್ತಿರುವುದು ಒಂದು ಹೆಣ್ಣಿನ ಕನ್ಯತ್ವ ಪರೀಕ್ಷೆ!!

ಹೌದು, ವೈರಲ್ ಆದ ವಿಡಿಯೋ ಒಂದರಲ್ಲಿ ಒಬ್ಬ ಯುವತಿ ಬಿಳಿಯ ಬಟ್ಟೆಯೊಂದನ್ನು ಹಿಡಿದು ನಿಂತಿದ್ದಾಳೆ. ಅದರಲ್ಲಿ ರಕ್ತದ ಕಲೆಗಳಿವೆ. ಅದನ್ನು ನೋಡಿ ಅಲ್ಲಿರೋ ಹೆಂಗಸರೆಲ್ಲರೂ ಖುಷಿಯಿಂದ ಆ ಯುವತಿಯನ್ನು ತಬ್ಬಿಕೊಳ್ಳುತ್ತಿದ್ದಾರೆ. ಆನಂದಬಾಷ್ಪವನ್ನೂ ಹರಿಸುತ್ತಿದ್ದಾರೆ. ಸಂತೋಷದಲ್ಲಿ ತೇಲಾಡುತ್ತಿದ್ದಾರೆ. ಆ ಯುವತಿ ಕೂಡ ನಗುವಿನ ಜೊತೆ ತಾನೇನೋ ಗೆದ್ದು ಬೀಗಿದೆ ಎನ್ನುವ ಸಂತಸದಲ್ಲಿ ಇದ್ದಾಳೆ. ಬಹುಶಃ ಈ ವೈರಲ್​ ವಿಡಿಯೋ ನೋಡಿದರೆ ಹಲವರಿಗೆ ಏನೂ ಅರ್ಥವಾಗದೇ ಹೋದೀತು. ಯಾಕೆಂದರೆ ಅಷ್ಟಕ್ಕೂ ಇಲ್ಲಿ ನಡೆಯುತ್ತಿರುವುದು ಕನ್ಯತ್ವದ ಪರೀಕ್ಷೆ. ಅದರಲ್ಲಿ ನವವಿವಾಹಿತೆ ಪಾಸ್​ ಆಗಿದ್ದಾಳೆ. ಇದು ಟರ್ಕಿ ದೇಶದ ಸಂಪ್ರದಾಯ ಎಂಬುದು ಇನ್ನು ಅಚ್ಚರಿ ವಿಚಾರ.

ಅಂದಹಾಗೆ ಮೊದಲ ರಾತ್ರಿಯ ಬಳಿಕ ಈ ಪರೀಕ್ಷೆ ನಡೆಯುತ್ತದೆ. ಕನ್ಯಾಪೊರೆ ಹರಿದು ರಕ್ತ ಬಂದರೆ, ಆಕೆ ಮದುವೆಯ ಮುನ್ನ ಯಾವುದೇ ರೀತಿಯ ಲೈಂಗಿಕ ಚಟುವಟಿಕೆ ನಡೆಸಿಲ್ಲ ಎನ್ನುವುದು ಸಾಬೀತು ಆಗುತ್ತದೆ. ನಾನು ಇನ್ನೂ ಕನ್ಯೆಯಾಗಿದ್ದು, ನನ್ನ ಮೊದಲ ರಾತ್ರಿಯಲ್ಲಿ ಕನ್ಯಾಪೊರೆ ಹರಿದಿದ್ದು, ರಕ್ತ ಬಂದಿದೆ ಎಂದು ಆ ಬಿಳಿಯ ವಸ್ತ್ರದಲ್ಲಿ ತೋರಿಸುತ್ತಿದ್ದಾಳೆ ಈಕೆ! ಇದನ್ನು ಕೇಳಿದರೆ ಅಬ್ಬಾ ಯಾವ ಕಾಲದಲ್ಲಿ ನಾವಿದ್ದೇವೆ ಎಂದು ಹಲವರು ಕಮೆಂಟ್​ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೇ, ಇದು ಮಹಿಳೆ ಶುದ್ಧಳೋ ಅಲ್ಲವೋ ಎನ್ನುವ ಪರೀಕ್ಷೆಯಂತೆ. ಹಾಗಿದ್ದರೆ ಪುರುಷರಿಗೆ ಈ ಪರೀಕ್ಷೆ ಏಕಿಲ್ಲ ಎನ್ನುವುದು ಹಲವರ ಪ್ರಶ್ನೆ.

Comments are closed.