Mandya: ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದ ಯುವತಿ ನಾಪತ್ತೆ!!

Mandya: ಹಿಂದೂ ಯುವಕನನ್ನು ಪ್ರೀತಿಸಿ ಮದುವೆಯಾಗಿ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದ ಮುಸ್ಲಿಂ ಯುವತಿ ನಾಪತ್ತೆಯಾಗಿರುವ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನಲ್ಲಿ ನಡೆದಿದೆ. ಈ ಕುರಿತು ಪೊಲೀಸರ ಬಳಿ ದೂರು ನೀಡಲು ಹೋದಾಗ, ಪೊಲೀಸರು ದೂರು ದಾಖಲಿಸಲು ನಿರಾಕರಿಸಿದ್ದಾರೆ. ಹೀಗಾಗಿ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆಯನ್ನು ಕೂಡ ಮಾಡಲಾಗಿದೆ.

9 ವರ್ಷಗಳ ಹಿಂದೆ ವೆಂಕಟೇಶ್​​ ಮುಸ್ಲಿಂ ಯುವತಿಯನ್ನ ಪ್ರೀತಿಸಿ ಮದುವೆ ಆಗಿದ್ದರು. ಆನಂತರ ಹಿಂದೂ ಧರ್ಮಕ್ಕೆ ವೆಂಕಟೇಶ್ ಪತ್ನಿ ಮತಾಂತರವಾಗಿದ್ದರು. ಜ.23ರಂದು ಕೊಡಗು ಜಿಲ್ಲೆಯ ಸೋಮವಾರಪೇಟೆಯ ತವರು ಮನೆಗೆ ಹೋಗಿದ್ದರು. ಆನಂತರ ಪತ್ನಿ ಹಾಗೂ ಮಗ ಮನೆಗೆ ವಾಪಸ್ ಆಗಿಲ್ಲ ಎಂದು ವೆಂಕಟೇಶ್ ಆರೋಪಿಸಿದ್ದಾರೆ. ಸದ್ಯ ಪತ್ನಿ ಖುಷಿ ತಾಯಿಯ ವಿರುದ್ಧ ದೂರು ನೀಡಲು‌ ವೆಂಕಟೇಶ್ ಮುಂದಾಗಿದ್ದು, ಮದ್ದೂರಿನ ಸಿದ್ದಾರ್ಥನಗರದ ವೆಂಕಟೇಶ್‌ನಿಂದ ಪೊಲೀಸರು ದೂರು ಸ್ವೀಕರಿಸಿರಲಿಲ್ಲ. ಹೀಗಾಗಿ ಪ್ರತಿಭಟನೆ ನಡೆಸಿ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ದಾರೆ.

Comments are closed.