MP: 22 ವರ್ಷದ ಯುವಕನ ಪ್ರಾಣ ತೆಗೆದ ಸಾಕು ಬೇಕು!!

Share the Article

MP: ಸಾಕುಪ್ರಾಣಿಗಳಲ್ಲಿ ಬೆಕ್ಕು ಎಂದರೆ ಹಲವರಿಗೆ ಪಂಚಪ್ರಾಣ. ನಾಯಿಯ ಜೊತೆ ಬೆಕ್ಕನ್ನು ಕೂಡ ಇಷ್ಟಪಡುವವರು ಹಲವರಿದ್ದಾರೆ. ಮುದ್ದಾಗಿ ಸಾಕುದ ಬೆಕ್ಕು ಪರಚಿದ ಬಳಿಕ 22 ವರ್ಷದ ಯುವಕ ಪ್ರಾಣವನ್ನೇ ಕಳೆದುಕೊಂಡಿರುವಂತಹ ಆಘಾತಕಾರಿ ಘಟನೆಯೊಂದು ನಡೆದಿದೆ.

ಹೌದು, ಮಧ್ಯಪ್ರದೇಶದ ಶಹದೋಲ್ ಜಿಲ್ಲೆಯ ಅಮಲೈ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ವರದಿಯಾಗಿದೆ. ಕೆಲ ದಿನಗಳ ಹಿಂದೆ ಜಿಲ್ಲೆಯ ನಿವಾಸಿ 22 ವರ್ಷದ ದೀಪಕ್ ಕೋಲ್ಗೆ ಮನೆಯಲ್ಲಿ ಸಾಕಿದ್ದ ಬೆಕ್ಕು ದಾಳಿ ಮಾಡಿ, ಉಗುರುಗಳಿಂದ ಪರಚಿ, ಕಚ್ಚಿತ್ತು. ಆದರೆ ಅದನ್ನು ಯುವಕ ನಿರ್ಲಕ್ಷಿಸಿದ್ದ. ನಂತರ ಆತನ ಆರೋಗ್ಯ ಹದಗೆಡಲು ಪ್ರಾರಂಭಿಸಿದೆ.

ಆತನನ್ನು ಬಳಿಕ ಚಿಕಿತ್ಸೆಗಾಗಿ ಎಸ್‌ಇಸಿಎಲ್ ಸೆಂಟ್ರಲ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆಯ ಸಮಯದಲ್ಲಿ, ದೀಪಕ್ ಆರೋಗ್ಯ ಮತ್ತಷ್ಟು ಹದಗೆಟ್ಟಿದೆ. ಬಳಿಕ ಆತನನ್ನು ಅದೇ ಊರಿನ ವೈದ್ಯಕೀಯ ಕಾಲೇಜಿಗೆ ಕಳುಹಿಸಲಾಯಿತು. ಆದರೆ ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ದೀಪಕ್ ಮೃತಪಟ್ಟಿದ್ದಾನೆ.

Comments are closed.