Chikkaballapura : ರಾಜ್ಯದಲ್ಲಿ ಬೆಚ್ಚಿ ಬೀಳಿಸುವ ಘಟನೆ- ಮಹಿಳೆಯನ್ನು ಕಿಡ್ನಾಪ್ ಮಾಡಿ, ಕಣ್ಣುಗುಡ್ಡೆ ಕಿತ್ತು ಮರಣಾಂತಿಕ ಹಲ್ಲೆ

Share the Article

Chikkaballapura: ಮಹಿಳೆ ಒಬ್ಬರನ್ನು ಕಿಡ್ನಾಪ್ ಮಾಡಿ ಅವರ ಕಣ್ಣು ಗುಡ್ಡೆ ಕಿತ್ತು ಮಾರಣಾಂತಿಕ ಹಲ್ಲೆ ನಡೆಸಿದ ರಾಕ್ಷಸೀ ಕೃತ್ಯದ ಘಟನೆಯೊಂದು ಚಿಕ್ಕಬಳ್ಳಾಪುರದಲ್ಲಿ ಬೆಳಕಿಗೆ ಬಂದಿದೆ.

ಹೌದು, ಮಹಿಳೆಯನ್ನು ಕೂಡಿ ಹಾಕಿ ಕಣ್ಣುಗುಡ್ಡೆ ಕಿತ್ತು ಚಿತ್ರಹಿಂಸೆ ನೀಡಿದ ಭಯಾನಕ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಜಗನಹಳ್ಳಿ ಎಂಬ ಗ್ರಾಮದಲ್ಲಿ ನಡೆದಿದೆ.

ತೋಟದ ಮನೆಯಲ್ಲಿ ಮಹಿಳೆಯನ್ನು ಕೂಡಿಹಾಕಿ ಭೀಕರವಾಗಿ ಹಲ್ಲೆ ನಡೆಸಲಾಗಿದೆ. ಬ್ಯಾಟ್, ರಾಡ್ ಗಳಿಂದ ಮುಖಕ್ಕೆ ಹೊಡೆದು ಹಲ್ಲೆ ನಡೆಸಲಾಗಿದೆ. ಈ ಘಟನೆ ಗುಡಿಬಂಡೆ ತಾಲೂಕಿನ ಜಗನಹಳ್ಳಿ ಗ್ರಾಮದಲ್ಲಿ ನಡೆದಿದ್ದು, ಗಂಗರಾಜು ಎಂಬುವವರ 2 ನೇ ಪತ್ನಿ ಸಂಗೀತ ಮೇಲೆ ಹಲ್ಲೆ ನಡೆದಿದೆ. ಮೊದಲು ಹೆಂಡತಿ ಕಡೆಯವರು ಈ ಕೃತ್ಯ ಎಸಗಿದ್ದಾರೆ ಎಂದು ಸಂಗೀತ ಆರೋಪಿಸಿದ್ದಾರೆ.

ಬೆಂಗಳೂರಿನಲ್ಲಿ ಮೂರು ತಿಂಗಳ ಹಿಂದೆ ಗಂಗರಾಜು ಸಂಗೀತ ಅವರನ್ನು ಎರಡನೇ ಮದುವೆ ಆಗಿದ್ದರು. ಗಂಗರಾಜು ಸಂಬಂಧಿ ರಾಜಮ್ಮ ಕಡೆಯವರಿಂದ ಸಂಗೀತ ಮೇಲೆ ಹಲ್ಲೆ ನಡೆಸಲಾಗಿದೆ.ನಿನ್ನೆ ರಾತ್ರಿ ಸಂಗೀತ ತಂದೆ ಹಾಗೂ ಸಹೋದರಿಯರ ಜೊತೆಗೆ ಕೂಡ ಈ ಒಂದು ಗಲಾಟೆ ನಡೆದಿದೆ ಎಂದು ತಿಳಿದುಬಂದಿದೆ. ಸಂಗೀತ ಸಹೋದರಿ ಹಂಸ ಮೇಲೆ ಕೂಡ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.

Comments are closed.