Jaipur: 270 ಕೆ.ಜಿ. ರಾಡ್‌ ಬಿದ್ದು ಪವರ್‌ಲಿಫ್ಟರ್‌ ಸಾವು

Jaipur: ಚಿನ್ನದ ಪದಕ ವಿಜೇತ ಉದಯೋನ್ಮುಖ ಮಹಿಳಾ ಪವರ್‌ಲಿಫ್ಟರ್‌ ಯಷ್ತಿಕಾ ಆಚಾರ್ಯ ರಾಜಸ್ಥಾನದ ಬಿಕಾನೇರ್‌ನ ಜಿಮ್‌ನಲ್ಲಿ ಅಭ್ಯಾಸ ಮಾಡುವ ಸಂದರ್ಭದಲ್ಲಿ 270 ಕೆ.ಜಿ. ತೂಕದ ರಾಡ್‌ ಕುತ್ತಿಗೆ ಮೇಲೆ ಬಿದ್ದು ಮೃತ ಹೊಂದಿದ್ದಾರೆ.

17 ವರ್ಷದ ಯಷ್ತಿಕಾ ಜೂನಿಯರ್‌ ರಾಷ್ಟ್ರೀಯ ಕ್ರೀಡಾಕೂಟದ ಪವರ್‌ಲಿಫ್ಟಿಂಗ್‌ನಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದು, ತರಬೇತುದಾರ ಮಣಭಾರದ ರಾಡನ್ನು ಯಷ್ತಿಕಾ ಮೇಲೆ ಹೊರಿಸುವ ಸಂದರ್ಭದಲ್ಲಿ ಈ ದುರಂತ ನಡೆದಿದೆ. ರಾಡ್‌ ಬಿದ್ದ ಪರಿಣಾಮ ಅವರ ಕುತ್ತಿಗೆ ಮುರಿದಿರುವುದಾಗಿ ಪೊಲೀಸರು ಹೇಳಿದ್ದಾರೆ. ಈ ಸಂದರ್ಭ ತರಬೇತುದಾರರ ಕೂಡಾ ಗಾಯಗೊಂಡಿದ್ದಾರೆ.

ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ದುರ್ಘಟನೆ ನಡೆದ ತಕ್ಷಣವೇ ಯಷ್ತಿಕಾರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಆ ವೇಳೆಗೆ ಅವರು ಮೃತಪಟ್ಟಿದ್ದರು ಎಂದು ವೈದ್ಯರು ಪರೀಕ್ಷೆ ಮಾಡಿ ತಿಳಿಸಿದ್ದಾರೆ. ಇಲ್ಲಿಯವರೆಗೂ ಯಷ್ತಿಕಾ ಅವರ ಪೋಷಕರು ದೂರನ್ನು ದಾಖಲು ಮಾಡಿಲ್ಲ ಎಂದು ತಿಳಿದು ಬಂದಿದೆ.

Comments are closed.