Bengaluru : ಕಟ್ಟಡಕ್ಕೆ ಪಾಯ ತೆಗೆಯುವಾಗ ಕುಸಿಯಿತು ಪಕ್ಕದ ಎರಡು ಅಂತಸ್ತಿನ ಮನೆ !!

Bengaluru : ಬೆಂಗಳೂರಿನಲ್ಲಿ ಒಂದು ಅಚ್ಚರಿಯ ದುರ್ಘಟನೆ ನಡೆದಿದ್ದು ಕಟ್ಟಡ ಒಂದಕ್ಕೆ ಪಾಯತೆಗೆಯುವ ವೇಳೆ ಪಕ್ಕದಲ್ಲಿದ್ದ ಎರಡು ಅಂತಸ್ತಿನ ಮನೆ ಕುಸಿದು ಬಿದ್ದಿದೆ.
ಭೀಮಾ ನಗರದ ತಿಪ್ಪಸಂದ್ರದಲ್ಲಿ ಹೊಸ ಕಟ್ಟಡವನ್ನು ನಿರ್ಮಿಸಲು ಪಾಯ ತೆಗೆಯುತ್ತಿದ್ದಾಗ ಪಕ್ಕದಲ್ಲಿ ಇದ್ದ ಎರಡು ಅಂತಸ್ತಿನ ಮನೆ ಧಿಡೀರನೆ ಕುಸಿದು ಬಿದ್ದಿದೆ. ಕಟ್ಟಡದಲ್ಲಿ ಐದು ಬಾಡಿಗೆ ಮನೆಗಳಿದ್ದವು. ಕಟ್ಟಡ ಕುಸಿದ ವೇಳೆ ಮನೆಯಲ್ಲಿದ್ದವರು ಹೊರಗೆ ಓಡಿದ್ದಾರೆ.
ಬೇಸ್‌ಮೆಂಟ್‌ನಲ್ಲಿ ಐದಕ್ಕೂ ಹೆಚ್ಚು ಬೈಕ್‌ಗಳು ಜಖಂಗೊಂಡಿವೆ. ಸದ್ಯಕ್ಕೆ ಯಾವುದೇ ಪ್ರಾಣಾಪಾಯ ಆಗಿಲ್ಲ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಹಾಗೂ ಪೊಲೀಸರು ದೌಡಾಯಿಸಿದ್ದಾರೆ.
Comments are closed.