of your HTML document.

Viral: ಕೋಳಿ ಸಾಗಾಟದ ವಾಹನ ಪಲ್ಟಿ: ಕೋಳಿಗಾಗಿ ಮುಗಿಬಿದ್ದ ಜನರು

U.P: ಉತ್ತರ ಪ್ರದೇಶದ ಕನ್ನೌಜ್‌ ಎಂಬಲ್ಲಿ ಚಾಲಕ ನಿದ್ದೆಗೆ ಜಾರಿದ ಕಾರಣ ಕನೌಜ್‌ ಎಕ್ಸ್‌ಪ್ರೆಸ್‌ವೇಯಲ್ಲಿ ಕೋಳಿ ಸಾಗಾಟದ ವಾಹನವೊಂದು ಪಲ್ಟಿ ಹೊಡೆದ ಪರಿಣಾಮ ಕೋಳಿಗಳು ವಾಹನದಿಂದ ಕೆಳಗೆ ಬಿದ್ದಿದ್ದೆ. ಬಿದ್ದ ಕೋಳಿಗಳನ್ನು ಲೂಟಿ ಮಾಡಲು ಜನರು ನಾ ಮುಂದು ತಾ ಮುಂದೆ ಎಂದು ಮುಂದೆ ಬಂದು, ಕೈಗೆ ಸಿಕ್ಕಷ್ಟು ಕೋಳಿಗಳನ್ನು ಕೊಂಡು ಹೋಗಿದ್ದಾರೆ. ಅನಂತರ ಪೊಲೀಸರು ಸ್ಥಳಕ್ಕೆ ಬಂದು ಟ್ರಕ್‌ ಚಾಲಕ ಸೇರಿ ಗಾಯಗೊಂಡವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಕೋಳಿ ಕೊಂಡೊಯ್ಯುವ ವೀಡಿಯೋವನ್ನು ಎಕ್ಸ್‌ ಖಾತೆಯಲ್ಲಿ ಶೇರ್‌ ಮಾಡಲಾಗಿದ್ದು, ಇದರಲ್ಲಿ ಜನರ ಕೋಳಿಗಾಗಿ ಮುಗಿಬಿದ್ದಿರುವ ದೃಶ್ಯವಿದೆ.

Comments are closed.