Earthquake in Delhi-NCR: ರಾಷ್ಟ್ರ ರಾಜಧಾನಿಯಲ್ಲಿ ಪ್ರಬಲ ಭೂಕಂಪ

Earthquake in Delhi-NCR: ಇಂದು, ಸೋಮವಾರ (ಫೆಬ್ರವರಿ 17, 2025) ಬೆಳಿಗ್ಗೆ 5.36 ಕ್ಕೆ ರಾಷ್ಟ್ರ ರಾಜಧಾನಿ ದೆಹಲಿ-ಎನ್‌ಸಿಆರ್ ಸೇರಿದಂತೆ ಉತ್ತರ ಭಾರತದಾದ್ಯಂತ ಪ್ರಬಲ ಭೂಕಂಪನವಾಗಿದೆ. ರಾಷ್ಟ್ರೀಯ ಭೂಕಂಪ ಕೇಂದ್ರದ ಪ್ರಕಾರ, ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 4.0 ಆಗಿತ್ತು. ಆರಂಭಿಕ ಮಾಹಿತಿಯ ಪ್ರಕಾರ, ಭೂಕಂಪದ ಕೇಂದ್ರಬಿಂದು ಧೌಲಾ ಕುವಾನ್ ಬಳಿಯ ಲೇಕ್ ಪಾರ್ಕ್ ಬಳಿ ಇತ್ತು.
ಕಂಪನವು ಎಷ್ಟು ಪ್ರಬಲವಾಗಿದೆ ಎಂದರೆ ಕಟ್ಟಡಗಳು ಅಲುಗಾಡಲಾರಂಭಿಸಿದವು ಮತ್ತು ಜನರು ತಮ್ಮ ಮನೆಗಳಿಂದ ಹೊರಬಂದರು. ಮರಗಳ ಮೇಲೆ ಕುಳಿತ ಹಕ್ಕಿಗಳೂ ಜೋರಾಗಿ ಸದ್ದು ಮಾಡುತ್ತ ಇತ್ತಿಂದತ್ತ ಹಾರಾಡತೊಡಗಿದವು. ಇದರ ಕೇಂದ್ರವು ನವದೆಹಲಿಯಲ್ಲಿ ನೆಲದಿಂದ ಐದು ಕಿಲೋಮೀಟರ್ ಆಳದಲ್ಲಿತ್ತು. ಇದು 28.59 ಡಿಗ್ರಿ ಉತ್ತರ ಅಕ್ಷಾಂಶ ಮತ್ತು 77.16 ಡಿಗ್ರಿ ಪೂರ್ವ ರೇಖಾಂಶದಲ್ಲಿತ್ತು.
ದೆಹಲಿ-ಎನ್‌ಸಿಆರ್ ಜೊತೆಗೆ, ಉತ್ತರ ಪ್ರದೇಶದ ಮೊರಾದಾಬಾದ್, ಸಹರಾನ್‌ಪುರ, ಅಲ್ವಾರ್, ಮಥುರಾ ಮತ್ತು ಆಗ್ರಾದಲ್ಲಿ ಪ್ರಬಲ ಕಂಪನದ ಅನುಭವವಾಗಿದೆ. ಹರಿಯಾಣದ ಕುರುಕ್ಷೇತ್ರ, ಹಿಸಾರ್ ಮತ್ತು ಕೈತಾಲ್‌ನಲ್ಲಿ ಕಂಪನದ ಅನುಭವವಾಗಿದೆ. ಆದರೆ, ಇಲ್ಲಿಯವರೆಗೆ ಯಾವುದೇ ರೀತಿಯ ಹಾನಿಯ ಸುದ್ದಿ ಬೆಳಕಿಗೆ ಬಂದಿಲ್ಲ.
ಪ್ರಬಲ ಭೂಕಂಪದ ನಂತರ ದೆಹಲಿ ಪೊಲೀಸರು ತುರ್ತು ಸಹಾಯವಾಣಿ ಸಂಖ್ಯೆಯನ್ನು ನೀಡಿದ್ದಾರೆ. ದೆಹಲಿ ಪೊಲೀಸರು X ನಲ್ಲಿ ಪೋಸ್ಟ್ ಮಾಡಿದ್ದಾರೆ . ಯಾವುದೇ ತುರ್ತು ಸಹಾಯಕ್ಕಾಗಿ, 112 ಅನ್ನು ಡಯಲ್ ಮಾಡುವ ಮೂಲಕ ನಮ್ಮನ್ನು ಸಂಪರ್ಕಿಸಿ ಎಂದು ಪೋಸ್ಟ್ ಮಾಡಿದ್ದಾರೆ.
ಭೂಕಂಪದ ಬಗ್ಗೆ ದೆಹಲಿಯ ಮಾಜಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ ಮತ್ತು “ಎಲ್ಲರ ಸುರಕ್ಷತೆಗಾಗಿ ನಾನು ಪ್ರಾರ್ಥಿಸುತ್ತೇನೆ” ಎಂದು ಹೇಳಿದ್ದಾರೆ. ಎಎಪಿ ನಾಯಕಿ ಅತಿಶಿ ಕೂಡ ಪೋಸ್ಟ್ ಮಾಡಿದ್ದು, “ಇದೀಗ ದೆಹಲಿಯಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ಎಲ್ಲರೂ ಸುರಕ್ಷಿತವಾಗಿರಲಿ ಎಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ” ಎಂದು ಬರೆದಿದ್ದಾರೆ.
Comments are closed.