Nepal: ಬಲೂನ್‌ ಸ್ಫೋಟ; ನೇಪಾಳ ಉಪಪ್ರಧಾನಿಗೆ ಸುಟ್ಟಗಾಯ

Share the Article

Nepal: ಶನಿವಾರ ಮಧ್ಯಾಹ್ನ ನಡೆದ ಪೋಖರ ಪ್ರವಾಸೋದ್ಯಮ ವರ್ಷದ ಉದ್ಘಾಟನಾ ಕಾರ್ಯಕ್ರಮವೊಂದರಲ್ಲಿ ಬಲೂನ್‌ ಸ್ಫೋಟಗೊಂಡ ಕಾರಣದಿಂದ ನೇಪಾಳದ ಉಪ ಪ್ರಧಾನಿ ಮತ್ತು ಹಣಕಾಸು ಸಚಿವ ಬಿಷ್ಣು ಪ್ರಸಾದ್‌ ಪೌಡೆಲ್‌ ಹಾಗೂ ಪೋಖರ ಮೆಟ್ರೋಪಾಲಿಟನ್‌ ಮೇಯರ್‌ ಧನರಾಜ್‌ ಆಚಾರ್ಯ ಅವರಿಗೆ ಸುಟ್ಟ ಗಾಯಗಳಾಗಿದೆ. ಮೇಲೆ ಹಾರಿಸಲು ಸಿದ್ಧವಾಗಿದ್ದ ಬಲೂನುಗಳಿಗೆ ಪಟಾಕಿಯ ಬೆಂಕಿ ತಗುಲಿ ಸ್ಫೋಟಗೊಂಡ ಪರಿಣಾಮ ಅವಘಡ ಸಂಭವಿಸಿದೆ. ಹೆಲಿಕಾಪ್ಟರ್‌ನಲ್ಲಿ ಇಬ್ಬರನ್ನೂ ಕಠ್ಮಂಡುವಿನ ಕೀರ್ತಿಪುರದ ಬರ್ನ್‌ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ನೇಪಾಳದ ಉಪಪ್ರಧಾನಿ ಪೌಡೆಲ್‌ ಅವರ ಕೈ ಮತ್ತು ಮುಖದ ಮೇಲೆ ಸುಟ್ಟಗಾಯವಾಗಿದೆ. ಮೇಯರ್‌ ಆಚಾರ್ಯ ಅವರಿಗೆ ಗಂಭೀರ ಗಾಯವಾಗಿದೆ. ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Comments are closed.